ಸರಣಿ ಮುಗಿದ ಕೆಲವೇ ಗಂಟೆಯಲ್ಲಿ ಪಾಕ್ ಗೆ ಗುಡ್ ಬೈ ಹೇಳಿ ಭಾರತದತ್ತ ಹೊರಟ ನ್ಯೂಜಿಲೆಂಡ್: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನ ವಿರುದ್ಧದ ಸರಣಿ ಮುಗಿದ ಬೆನ್ನೆಲ್ಲೇ ನ್ಯೂಜಿಲೆಂಡ್ ತಂಡವು ಪಾಕ್ ಗೆ ಗುಡ್ ಬೈ ಹೇಳಿ ಭಾರತಕ್ಕೆ ಬಂದಿಳಿದಿದೆ.

ಏಕದಿನ ಸರಣಿ ಗೆದ್ದ ಖುಷಿಯನ್ನು ಸರಿಯಾಗಿ ಸಂಭ್ರಮಿಸದ ಕಿವೀಸ್ ಪಡೆ ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಹೊರಟಿದೆ.

ಜನವರಿ 13ರ ರಾತ್ರಿ ಸರಿಯಾಗಿ ಹತ್ತೂವರೆ ಗಂಟೆಗೆ ಪಂದ್ಯ ಮುಗಿಸಿದ ಕಿವೀಸ್ ತಂಡ ಸರಿಯಾಗಿ ಮಧ್ಯರಾತ್ರಿ 12.10ಕ್ಕೆ ಪಾಕಿಸ್ತಾನದಿಂದ ಭಾರತಕ್ಕೆ ವಿಮಾನ ಪ್ರಯಾಣ ಬೆಳೆಸಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸರಣಿ ಗೆಲುವಿನ ಬಳಿಕ ಕಿವೀಸ್ ಪಡೆ ಮಾಡಿದ ಕೆಲಸಗಳ ಇಂಚಿಂಚು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ ಈ ವಿಡಿಯೋವನ್ನು ಗಮನಿಸಿದರೆ, ಕಿವೀಸ್ ಪಡೆ, ಪಾಕಿಸ್ತಾನದಲ್ಲಿ ಒಂದು ಕ್ಷಣವೂ ನಿಲ್ಲಲು ಸಿದ್ಧವಿಲ್ಲ ಎಂಬದು ಕಾಣುತ್ತಿದೆ.

ನ್ಯೂಜಿಲೆಂಡ್ ತಂಡ, ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸಿದ ಎಲ್ಲಾ ಕ್ಷಣಗಳನ್ನು ವೀಡಿಯೊದಲ್ಲಿ ಸೆರೆ ಹಿಡಿದಿದೆ. ಇದರಲ್ಲಿ ರಾತ್ರಿ 10.30ಕ್ಕೆ ಸರಣಿ ಗೆದ್ದ ಆಟಗಾರರು ಪೆವಿಲಿಯನ್‌ಗೆ ಮರಳಿದ್ದಾರೆ. ಬಳಿಕ 10.55 ತಂಡ ವಿಜಯೋತ್ಸವ ಆಚರಿಸಿದೆ. 12.10ಕ್ಕೆ ರಾಷ್ಟ್ರೀಯ ಕ್ರೀಡಾಂಗಣದಿಂದ ಹೊರಟ ತಂಡ ನೇರವಾಗಿ ವಿಮಾನ ನಿಲ್ದಾಣ ತಲುಪಿದೆ. ಅಲ್ಲಿಂದ ತಂಡ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದು, ಜನವರಿ 14 ರ ಬೆಳಗ್ಗೆ, ಅಂದರೆ 5.45ಕ್ಕೆ ವಿಮಾನ ನಿಲ್ದಾಣದಿಂದ ಹೊರಟು, 6.55 ಕ್ಕೆ ಹೋಟೆಲ್ ತಲುಪಿದೆ.

ಮುಂದಿನ ವಾರ ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವೆ ಏಕದಿನ ಸರಣಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!