Sunday, August 14, 2022

Latest Posts

ಕಣ್ಣು ಕಾಣದೆ ಯಾತನೆ ಅನುಭವಿಸುತ್ತಿದ್ದ ಕಾಡುಕೋಣ ರಕ್ಷಿಸಿದ ಅರಣ್ಯ ಇಲಾಖೆ!

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಆಲ್ದೂರು ವಲಯದ ಸತ್ತಿಹಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಎರಡೂ ಕಣ್ಣು ಕಾಣದೆ ಅಲೆದಾಡುತ್ತಿದ್ದ ಬೃಹತ್ ಕಾಟಿ (ಕಾಡು ಕೋಣ) ವೊಂದನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕಾಡುಕೋಣ ಯಾರಿಗೂ ತೊಂದರೆ ಕೊಡದಿದ್ದರೂ, ಕಣ್ಣು ಕಾಣದೆ ಯಾತನೆ ಅನುಭವಿಸುತ್ತಿತ್ತು. ಈ ಬಗ್ಗೆ ಸ್ಥಳೀಯ ಬೆಳೆಗಾರರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ವನ್ಯಜೀವಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆದು ಶಿವಮೊಗ್ಗ ಸಿಂಹ ಧಾಮದ ನುರಿತ ವನ್ಯಜೀವಿ ವೈದ್ಯ ಸುಜಿತ್ ಹಾಗೂ ಭದ್ರಾ ವನ್ಯಜೀವಿ ವೈದ್ಯ ಯಶಸ್ ಒಡೆಯರ್ ತಂಡ ಕಾರ್ಯಾಚರಣೆ ನೆಡೆಸಿ ಅರವಳಿಕೆ ಮದ್ದು ನೀಡಿ ಕಾಡುಕೋಣ ರಕ್ಷಣೆ ಮಾಡಿದರು. ಅದನ್ನು ಮತ್ತೆ ಮರಳಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಮುದ್ದಣ,ರಾಜೇಶ್ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಗೌರವ ವನ್ಯಜೀವಿ ಪರಿಪಾಲಕ ವೀರೇಶ್, ಸಿಬ್ಬಂದಿಗಳಾದ ಗೌತಮ್, ನವೀನ್, ದರ್ಶನ್, ಮಂಜುನಾಥ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss