Tuesday, July 5, 2022

Latest Posts

ನೀವಿನ್ನು ಆರ್‌ಟಿಒದಲ್ಲಿ ಪರೀಕ್ಷೆ ಇಲ್ಲದೆ ಡ್ರೈವಿಂಗ್ ಲೈಸನ್ಸ್ ಪಡೆಯಬಹುದು !

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಚಾಲನಾ ಪರವಾನಗಿ ಪಡೆಯುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ಶೀಘ್ರವೇ ಹೊಸ ನಿಯಮವನ್ನು ಜಾರಿಗೆ ತರಲಿದ್ದು, ಇನ್ನು ಮುಂದೆ ನೀವು ಚಾಲನಾ ಪರೀಕ್ಷೆಯನ್ನು ಯಾವುದೇ ಆರ್‌ಟಿಒನಲ್ಲಿ ಕೈಗೊಳ್ಳಬೇಕಾಗಿಲ್ಲ. ಬದಲಿಗೆ ಯಾವುದೇ ಅಧಿಕೃತ ಮಾನ್ಯತೆ ಹೊಂದಿರುವ ಚಾಲಕರಲ್ಲಿ ತರಬೇತಿ ಪಡೆದರೆ ಸಾಕಾಗಲಿದ್ದು, ಇಂತಹ ತರಬೇತಿ ಪಡೆದ ಬಳಿಕ ನಿಮಗೆ ಚಾಲನಾ ಪರವಾನಗಿ ಲಭಿಸಲಿದೆ. ನಿಯಮವನ್ನು ಸರಳಗೊಳಿಸುವ ಮೂಲಕ ಈ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನಲಾದ ಭಾರೀ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ನೀವು ಅಧಿಕೃತ ಮಾನ್ಯತೆ ಪಡೆದ ಚಾಲಕರಲ್ಲಿ ಸೂಕ್ತ ತರಬೇತಿ ಮತ್ತು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಇದನ್ನು ವಿದ್ಯುನ್ಮಾನ ವ್ಯವಸ್ಥೆ (ಇ -ವ್ಯವಸ್ಥೆ)ಯಲ್ಲಿ ತಪಾಸಣೆಗಾಗಿ ದಾಖಲಿಸಬೇಕಾಗುತ್ತದೆ. ಈ ಇಡಿ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ , ಬದಲಿಗೆ ಇದು ತಂತ್ರಜ್ಞಾನ ಆಧರಿತವಾಗಿರುವ ಪ್ರಕ್ರಿಯೆಯಾಗಿರಲಿದೆ.ಇಲ್ಲಿ ಚಾಲಕರಿಗೆ ಅಕ್ರೆಡೇಶನ್ ಒದಗಿಸುವ ಪ್ರಕ್ರಿಯೆ, ಸೆಂಟರ್‌ಗಳು ಸ್ಪೇಸ್, ಡ್ರೈವಿಂಗ್ ಟ್ರ್ಯಾಕ್, ಐಟಿ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅನುಸರಿಸಬೇಕು. ತರಬೇತಿಯನ್ನು ನಿರ್ದಿಷ್ಟ ಪಠ್ಯದ ಪ್ರಕಾರವೇ ಪಡೆಯಬೇಕು.ಒಂದು ಬಾರಿ ಸೆಂಟರ್ ಪ್ರಮಾಣಪತ್ರ ನೀಡಿದಲ್ಲಿ ಇದು ಸಂಬಂಧಿತ ಮೋಟಾರ್ ವಾಹನ ಪರವಾನಗಿ ಅಧಿಕಾರಿಗೆ ತಲುಪಲಿದೆ ಎಂದು ಕೇಂದ್ರ ಭೂಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.
ಈ ಹೊಸ ನಿಯಮ ಜುಲೈಯಿಂದ ಜಾರಿಗೆ ಬರಲಿದೆ. ಇಂತಹ ಚಾಲನಾ ತರಬೇತಿ ಸೌಲಭ್ಯಗಳನ್ನು ಹೊಂದಲು ಆಸಕ್ತಿ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಾಜ್ಯ ಸರಕಾರಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss