ಹೊಸದಿಗಂತ ವರದಿ, ಪುತ್ತೂರು:
ಯುವತಿಯರು ಹೆಚ್ಚಾಗಿರುವ ಬಸ್ ಹತ್ತಿ ಕಿರುಕುಳ ಕೊಡುತ್ತಿದ್ದ ಆರೋಪಿಯೋರ್ವನನ್ನು ಪ್ರಯಾಣಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗಡಿಪಿಲದಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಪುತ್ತೂರಿನ ಬಸ್ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬೆಟ್ಟಂಪಾಡಿಯ ನೌಫಲ್ ಎಂದು ಹೆಸರಿಸಲಾಗಿದೆ. ಸವಣೂರು ಮೂಲಕ ಕಡಬ ಹೋಗುತ್ತಿದ್ದ ಬಸ್ ಏರಿದ್ದ ಆತ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯೋರ್ವರ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಈ ವಿಷಯ ತಿಳಿದು ಸಂಘಟನೆಯೊಂದರ ಕಾರ್ಯಕರ್ತರು ಬಸ್ ಗಡಿಪ್ಪಿಲ ತಲುಪುತ್ತಿದ್ದಂತೆ ಬಸ್ನ್ನು ನಿಲ್ಲಿಸಿ ಆರೋಪಿಯನ್ನು ವಿಚಾರಿಸಿ ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರಿಗೆ ಒಪ್ಪಿಸಿದರು. ಆರೋಪಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.