ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಯುವತಿ, ಮುಂದೇನಾಯ್ತು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲಿಗಾಗಿ ಕಾಯುತ್ತಿದ್ದ ಓರ್ವ ಯುವತಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದಿರುವ ಘಟನೆ ಬ್ಯೂನಸ್ ಐರಿಸ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನೋಡನೋಡುತ್ತಿದ್ದಂತೆ ಬಿದ್ದ ಯುವತಿಯನ್ನು ಕಂಡು ನಿಲ್ದಾಣದಲ್ಲಿದ್ದವರು ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ. ಆಕೆ ಸತ್ತಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿಯಂತೆ ಬದುಕುಳಿದಿದ್ದಾಳೆ.

ರೈಲಿಗಾಗಿ ಕಾಯುತ್ತಿದ್ದ ಕ್ಯಾಂಡೆಲಾ ಎಂಬ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ರಕ್ಷಣೆ ಬಳಿಕ ತನಗೆ ಅಧಿಕ ರಕ್ತದೊತ್ತಡ ಇದೆ ಎಂದು ತಿಳಿಸಿದ್ದಾರೆ. ನಿಲ್ದಾಣದಲ್ಲಿದ್ದ ರಕ್ಷಣೆ ಸಿಬ್ಬಂದಿ ಹಾಗೂ ನಾಗರೀಕರು ಯುವತಿಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತನಗೆ ಪುನರ್ಜನ್ಮ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಯುವತಿ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!