SHOCKING | ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಾವಣಗೆರೆಯ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ ಮೃತರು. ಹೃದಯ ಸಂಬಂಧಿ ಸಮಸ್ಯೆಯಿಂದ ಅನುಷಾ ಬಳಲುತ್ತಿದ್ದು, ಪ್ರತಿ ತಿಂಗಳು ಇಂಜೆಕ್ಷನ್‌ ಪಡೆಯುತ್ತಿದ್ದರು. ಅಂತೆಯೇ ಆಸ್ಪತ್ರೆಗೆ ಬಂದು ಇಂಜೆಕ್ಷನ್‌ ಹಾಕಿಸಿಕೊಂಡಿದ್ದಾರೆ. ಆದರೆ ಅದನ್ನು ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಮೆಡಿಕಲ್‌ ಸ್ಟೋರ್‌ನಿಂದ ಇಂಜೆಕ್ಷನ್‌ ಖರೀದಿ ಮಾಡಿ ತಂದು ಆಸ್ಪತ್ರೆಗೆ ಕೊಟ್ಟಿದ್ದಾರೆ. ಇಂಜೆಕ್ಷನ್‌ ಸರಿ ಇದೆಯೋ? ಅವಧಿ ಮುಗಿದಿದೆಯೋ? ಮೆಡಿಕಲ್‌ ಸ್ಟೋರ್‌ನವರು ಸರಿಯಾಗಿ ಕೊಟ್ಟಿದ್ದಾರೋ … Continue reading SHOCKING | ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಮಹಿಳೆ