ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ನೀರು ಕುಡಿಯುವ ವೇಳೆ ಕೃತಕ ಹಲ್ಲನ್ನು ನುಂಗಿದ ಮಹಿಳೆ ಮೃತಪಟ್ಟಿದ್ದಾರೆ.
ಚೆನ್ನೈನ ವಲಸರವಕ್ಕಂನ ರಾಜಲಕ್ಷ್ಮಿ(43) ಮೃತರು. ರಾಜಲಕ್ಷ್ಮಿ ಮೂರು ಕೃತಕ ಹಲ್ಲುಗಳನ್ನು ಹೊಂದಿದ್ದರು.
ನೀರು ಕುಡಿಯುವಾಗ ಒಂದು ಹಲ್ಲನ್ನು ನುಂಗಿದ್ದಾರೆ. ಕೆಲವೇ ಸಮಯದಲ್ಲಿ ವಾಂತಿ, ತಲೆನೋವು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೆ ಕಾರಣ ತಿಳಿಯದೆ ವೈದ್ಯರು ರಾಜಲಕ್ಷ್ಮಿಯನ್ನು ಮನೆ ಕಳುಹಿಸಿದ್ದಾರೆ. ಮರುದಿನ ರಾಜಲಕ್ಷ್ಮಿಗೆ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಏಳು ವರ್ಷಗಳ ಹಿಂದೆ ರಾಜಲಕ್ಷ್ಮಿ ಕೃತಕ ಹಲ್ಲು ಹಾಕಿಸಿದ್ದು, ಕೃತಕ ಹಲ್ಲು ಲೂಸ್ ಆಗಿದ್ದು, ಕೊರೋನಾ ಕಾರಣದಿಂದ ರಾಜಲಕ್ಷ್ಮಿ ವೈದ್ಯರ ಬಳಿ ಹೋಗಿರಲಿಲ್ಲ. ಅದರಿಂದಲೇ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 174 ( ಅಸ್ವಾಭಾವಿಕ ಸಾವು) ಅನ್ವಯ ಪ್ರಕರಣ ದಾಖಲಿಸಲಾಗಿದೆ.