ಶ್ರೀರಾಮನ ದರುಶನವಾಯಿತೆಂದು ಅರುಣ್‌ ಗೋವಿಲ್‌ ಕಾಲಿಗೆ ಬಿದ್ದ ಮಹಿಳೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಮಾನಂದ್‌ ಸಾಗರ್‌ ನಿರ್ದೇಶನ ಮಾಡಿದ್ದ ರಾಮಾಯಣ ಧಾರವಾಹಿ 1987ರಲ್ಲಿ ಅಂದಾಜು ಒಂದೂವರೆ ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಧಾರವಾಹಿಯಲ್ಲಿ ಅರುಣ್‌ ಗೋವಿಲ್‌, ರಾಮನ ಪಾತ್ರವನ್ನು ನಿರ್ವಹಿಸಿದ್ದರೆ, ದೀಪಿಕಾ ಚಿಖಾಲಿಯಾ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಅವರಿಗೆ ಸಿಕ್ಕಿದ ಜನಪ್ರಿಯತೆ ಅಷ್ಟಿಷ್ಟಲ್ಲ. ಇಂದಿಗೂ ಅವರಿಬ್ಬರೂ ಜನ ರಾಮ, ಸೀತೆ ಎಂದೇ ಗುರುತುಹಿಡಿಯುತ್ತಾರೆ.

ಇದಕ್ಕೆ ಸಾಕ್ಷಿ ಎಂಬುವಂತೆ ರಾಮನ ಪಾತ್ರಧಾರಿಯಾಗಿದ್ದ ಅರುಣ್‌ ಗೋವಿಲ್‌ ಅವರನ್ನು ವಿಮಾನನಿಲ್ದಾಣದಲ್ಲಿ ನೋಡಿದ್ದ ಮಧ್ಯವಯಸ್ಕ ಮಹಿಳೆಯೊಬ್ಬಳು ಅವರ ಕಾಲಿಗೆ ಬಿದ್ದು ನಮಸ್ಕಾರ ಪಡೆದಿದ್ದಾರೆ. ಈ ವೇಳೆ ಅರುಣ್‌ ಗೋವಿಲ್‌ ಬೇಡ ಬೇಡ ಎಂದು ನಿರಾಕರಿಸಿದರೂ, ಕಾಲಿಗೆ ಬಿದ್ದ ಆಕೆಯನ್ನು ಸಂತೈಸಿದ ವಿಡಿಯೋ ವೈರಲ್ ಆಗಿದೆ. ಭಾವುಕಳಾಗಿದ್ದ ಆಕೆ, ಅರುಣ್‌ ಗೋವಿಲ್‌ ಅವರಿಗೆ ಕೈ ಮುಗಿಯುತ್ತಲೇ ಫೋಟೋಗೆ ಪೋಸ್‌ ನೀಡಿದ್ದಾರೆ.

ರಾಮಾಯಣದಲ್ಲಿ ಅರುಣ್ ಗೋವಿಲ್ ರಾಮನ ಪಾತ್ರವನ್ನು ನೋಡಿದ ಜನರು ಅವರನ್ನು ದೇವರು ಎಂದೇ ಭಾವಿಸಿ ನೋಡಿದ್ದಾರೆ. ವರ್ಷಗಳೇ ಕಳೆದರೂ ಅರುಣ್ ಗೋವಿಲ್ ಮೇಲಿನ ಪ್ರೇಕ್ಷಕರ ಪ್ರೀತಿ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ವೈರಲ್ ಆಗಿರುವ ವಿಡಿಯೋ.
ವೈರಲ್ ವಿಡಿಯೋದಲ್ಲಿ ಅರುಣ್ ಗೋವಿಲ್ ಅವರ ಕಾಲಿಗೆ ಮಹಿಳೆಯೊಬ್ಬರು ನಮಸ್ಕರಿಸುತ್ತಿರುವ ವಿಡಿಯೋ ಆಗಿದೆ. ಆಕೆ ನಮಸ್ಕರಿಸಿದ್ದು ನನಗಲ್ಲ, ರಾಮನಿಗೆ ಎಂದುಕೊಂಡೇ ಆಕೆಯನ್ನು ಸಂತೈಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅರುಣ್ ಗೋವಿಲ್ ಅವರನ್ನು ನೋಡಿದ ಮಹಿಳೆ. ಶ್ರೀರಾಮನು ತನಗೆ ದರ್ಶನ ನೀಡಲು ಬಂದಿದ್ದಾನೆ ಎಂದು ಅನಿಸಿದೆ. ತಡಮಾಡದೆ, ಅರುಣ್‌ ಗೋವಿಲ್‌ ಅವರ ಕಾಲಿಗೆ ಬಿದ್ದು ಕಣ್ಣೀರಿಡುತ್ತಲೇ ನಮಸ್ಕಾರ ಮಾಡಿದರು. ಆರಂಭದಲ್ಲಿ ಏನೆಲ್ಲಾ ಇದು, ಹೀಗೆಲ್ಲಾ ಮಾಡಬೇಡಿ ಎಂದ ಅರುಣ್‌ ಗೋವಿಲ್‌, ಕೊನೆಗೆ ಆಕೆಯ ಮನಸ್ಸಿನಲ್ಲಿ ರಾಮನಲ್ಲಿರುವ ಭಕ್ತಿಯನ್ನು ಕಂಡು, ಆಕೆಗೆ ಅಪ್ಪುಗೆ ನೀಡಿದರು..ರಾಮಲೀಲಾ ಕಾರ್ಯಕ್ರಮಕ್ಕಾಗಿ ಅರುಣ್‌ ಗೋವಿಲ್‌ ಮಹಾರಾಷ್ಟ್ರದ ಸಂಭಾಜಿನಗರಕ್ಕೆ ಆಗಮಿಸಿದ್ದರು ಈ ವೇಳೆ ಈ ಘಟನೆ ನಡೆದಿದೆ

ಅರುಣ್‌ ಗೋವಿಲ್‌ ಅವರನ್ನು ನಿಜವಾಗಿಯೇ ರಾಮ ಎಂದುಕೊಂಡಿದ್ದು ಇದೇ ಮೊದಲೇನಲ್ಲ. ಹಿಂದೆಯೂ ಅನೇಕ ಬಾರಿ ಈ ಘಟನೆಗಳಾಗಿದ್ದವು. ಇದನ್ನು ಅರುಣ್‌ ಗೋವಿಲ್‌, ಸಾಕಷ್ಟು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ರಾಮಾಯಣ ಧಾರವಾಹಿಯ ಸಮಯದಲ್ಲಿ ಜನರಿಂದ ಇಂಥ ಸಾಕಷ್ಟು ಭಕ್ತಿಪೂರ್ವಕ ಘಟನೆಗಳನ್ನು ಎದುರಿಸಿದ್ದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!