ಆನ್‌ಲೈನ್‌ ದೋಖಾ: 12,000ರೂ. ಮೌಲ್ಯದ ಎಲೆಕ್ಟ್ರಿಕ್ ಟೂತ್ ಬ್ರಷ್ ಆರ್ಡರ್‌ ಮಾಡಿದ್ರೆ ಬಂದಿದ್ದು…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ 12,000 ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಆರ್ಡರ್ ಮಾಡಿದ್ರೆ ಬಂದಿದ್ದು ಮಾತ್ರ  ಚಾಟ್ ಮಸಾಲಾ. ಪಾರ್ಸೆಲ್‌ ಓಪನ್‌ ಮಾಡ್ತಿದ್ದಂತೆ ಮಹಿಳೆ ಶಾಕ್‌ಗೆ ಒಳಗಾಗಿದ್ದಾರೆ. ಆನ್‌ಲೈನ್ ಶಾಪಿಂಗ್ ಯುಗದಲ್ಲಿ ಪ್ರತಿದಿನ ಅನೇಕ ವಸ್ತುಗಳನ್ನು ಆರ್ಡರ್ ಮಾಡುತ್ತೇವೆ. ಬಟ್ಟೆ ಮತ್ತು ಆಭರಣಗಳಿಂದ ಹಿಡಿದು ದಿನಸಿವರೆಗೆ, ಹೆಚ್ಚಿನ ವಸ್ತುಗಳನ್ನು ನಿಮಿಷಗಳಲ್ಲಿ ನಮ್ಮ ಮನೆಗಳಿಗೆ ತಲುಪಿಸಲಾಗುತ್ತದೆ.

ಕೆಲವೊಮ್ಮೆ ನಾವು ಆರ್ಡರ್ ಮಾಡಿದ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳೇ ಮನೆಗೆ ಬರುತ್ತವೆ. ಇತ್ತೀಚೆಗೆ, ಅಮೆಜಾನ್‌ನಿಂದ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಆರ್ಡರ್ ಮಾಡಿದ ಮಹಿಳೆಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಚಾಟ್ ಮಸಾಲಾ ಬಾಕ್ಸ್‌ಗಳು ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಬದಲಾಯಿಸಿವೆ. @badassflowerbby ಟ್ವಿಟ್ಟರ್‌ ಬಳಕೆದಾರ ಯುವತಿಯ ತಾಯಿ ದುಬಾರಿ ಟೂತ್ ಬ್ರಶ್ ಗೆ ಕ್ಯಾಶ್ ಆನ್ ಡೆಲಿವರಿ ನೀಡಿದ್ದಾರೆ.

ಪ್ಯಾಕೆಟ್ ತೆರೆದು ನೋಡಿದಾಗ ಒಳಗೆ ನಾಲ್ಕು MDH ಚಾಟ್ ಮಸಾಲಾ ಬಾಕ್ಸ್ ಗಳು ಕಂಡವು. ಇಂತಹ ಘಟನೆಯನ್ನು ಆಕೆ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂತಹದ್ದೇ ಘಟನೆಗಳನ್ನು ಎದುರಿಸಿದ ಹಲವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!