ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ತಮಿಳುನಾಡಿನಲ್ಲಿ ಡಿಎಂಕೆ ಗೆಲುವು ಸಾಧಿಸಿದ್ದ ಖುಷಿಯಲ್ಲಿ ಮಹಿಳೆಯೊಬ್ಬರು ತಮ್ಮ ನಾಲಗೆ ಕತ್ತರಿಸಿಕೊಂಡು ಹರಕೆ ತೀರಿಸಿರುವ ಸಂಗತಿ ಸೋಮವಾರ ನಡೆದಿದೆ.
ಈ ಮುನ್ನ, ತಮಿಳುನಾಡಿನಲ್ಲಿ ಡಿಎಂಕೆ ಗೆದ್ದರೆ ದೇವಿಗೆ ತಮ್ಮ ನಾಲಗೆ ಕತ್ತರಿಸಿ ಅರ್ಪಿಸುವುದಾಗಿ 32 ವರ್ಷದ ವನಿತಾ ಎಂಬುವರು ಹರಕೆ ಕಟ್ಟಿಕೊಂಡಿದ್ದರು. ಭಾನುವಾರ ಚುನಾವಣಾ ಫಲಿತಾಂಶ ಹೊರಬಂದಿದ್ದು, ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಸೋಮವಾರ ಬೆಳಿಗ್ಗೆ ವನಿತಾ ಮುತ್ತಾಲಯಮ್ಮನ ದೇವಸ್ಥಾನಕ್ಕೆ ಹೋಗಿ ನಾಲಗೆ ಕತ್ತರಿಸಿಕೊಂಡು ದೇವಿಗೆ ಅರ್ಪಿಸಲು ಮುಂದಾಗಿದ್ದಾರೆ.
ಆದರೆ ಕೊರೋನಾ ಕಾರಣವಾಗಿ ದೇವಸ್ಥಾನ ಮುಚ್ಚಿದ್ದರಿಂದ ಗೇಟ್ ಬಳಿಯೇ ನಾಲಗೆ ಹಾಕಿ ಅಲ್ಲಿಯೇ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಶಕಗಳ ನಂತರ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಹತ್ತು ವರ್ಷಗಳಿಂದ ವಿರೋಧ ಪಕ್ಷವಾಗಿದ್ದ ಡಿಎಂಕೆ ಈಗ ಆಡಳಿತ ಚುಕ್ಕಾಣಿ ಹಿಡಿಯಲಿದೆ. 234 ಕ್ಷೇತ್ರಗಳ ಪೈಕಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳಲ್ಲಿ ಜಯಗಳಿಸಿದೆ. ಡಿಎಂಕೆ ಪಕ್ಷ ಏಕಾಂಗಿಯಾಗಿ 133 ಸ್ಥಾನಗಳಲ್ಲಿ ಜಯಗಳಿಸಿದೆ.