ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲದಲ್ಲಿರುವ ತನ್ನ ಸಂಬಂಧಿಯನ್ನು ಭೇಟಿ ಮಾಡಲು ಬಂದಿದ್ದ ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಮೃತ ಮಹಿಳೆಯನ್ನು ಲಕ್ಷ್ಮೀ (25) ಎಂದು ಗುರ್ತಿಸಲಾಗಿದೆ. ಆಂಧ್ರದ ತಿರುಪತಿಯಿಂದ ಅಡೇಪೇಟೆಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಲಕ್ಷ್ಮೀ ಅವರು ಪತ್ನಿ ವೆಂಕಟರಮಣ ಅವರೊಂದಿಗೆ ಬಂದಿದ್ದಾರೆ. ಕುಟುಂಬವು ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು. ಬೆಳಗ್ಗೆ 9.30ರ ಸುಮಾರಿಗೆ ಸ್ನಾನ ಮಾಡಲು ಲಕ್ಷ್ಮೀ ಸ್ನಾನಗೃಹಕ್ಕೆ ತೆರಳಿದ್ದಾರೆ.
25 ನಿಮಿಷ ಕಳೆದರೂ ಆಕೆ ಹೊರಗೆ ಬಾರದಿದ್ದಾಗ ಪತಿ ತಪಾಸಣೆಗೆ ಹೋಗಿ ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.