ಚೀನಾದಲ್ಲಿ ಒಳಉಡುಪು ಜಾಹೀರಾತಿನಲ್ಲಿ ಮಹಿಳೆಯರು ಕಾಣಿಸುವಂತಿಲ್ಲ, ಅದಕ್ಕೆ ಉದ್ಯಮಿಗಳು ಮಾಡಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಮಹಿಳೆಯರಿಗೆ ಒಳಉಡುಪು ಜಾಹೀರಾತುಗಳಿಗೆ ಮಾಡೆಲಿಂಗ್ ಮಾಡೋದನ್ನು ನಿಷೇಧ ಮಾಡಲಾಗಿದೆ.

ಇದರಿಂದಾಗಿ ಒಳಉಡುಪುಗಳನ್ನು ಮಾರ್ಕೆಟಿಂಗ್ ಮಾಡೋಕೆ ಕಷ್ಟಪಡುತ್ತಿರುವ ಕಂಪನಿಗಳು ಇದೀಗ ಹೊಸ ಸೆಲ್ಯೂಷನ್ ಒಂದನ್ನು ಕಂಡುಕೊಂಡಿವೆ. ಅದೇನೆಂದರೆ ಪುರುಷ ಮಾಡೆಲ್‌ಗಳಿಗೆ ಮಹಿಳೆಯರ ಒಳಉಡುಪು ಧರಿಸಿ ಮಾರ್ಕೆಟಿಂಗ್ ಮಾಡೋದು.

ಹೌದು, ಚಿತ್ರ ವಿಚಿತ್ರ ಜಾಹೀರಾತುಗಳು ಚೀನಾದಲ್ಲಿ ಕಂಡುಬರುತ್ತಿದ್ದು, ಮಹಿಳಾ ಉಡುಪು ಧರಿಸುವ ಪುರುಷ ರೂಪದರ್ಶಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹೊಸ ಕಾನೂನಿನಿಂದ ಆನ್‌ಲೈನ್ ವ್ಯವಹಾರ ನಡೆಸುವ ಕಂಪನಿಗಳು ನಷ್ಟ ಅನುಭವಿಸಿದ್ದು, ಇದೀಗ ಪರಿಹಾರ ಕಂಡುಕೊಂಡಿವೆ. ತಕ್ಕಮಟ್ಟಿಗೆ ಪರಿಹಾರ ಯಶಸ್ಸು ನೀಡುತ್ತಿದೆ ಎಂದು ಕಂಪನಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!