Wednesday, July 6, 2022

Latest Posts

ತಾಲಿಬಾನಿಗಳ ಹೊಸ ರೂಲ್ಸ್: ಪುರುಷ ಸಂಬಂಧಿ ಜೊತೆಗಿಲ್ಲದಿದ್ದರೆ ಮಹಿಳೆಯರು ಪ್ರಯಾಣಿಸುವಂತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಕ್ಕಾಗಿನಿಂದಲೂ ಎಲ್ಲರಿಗಿಂತ ಹೆಚ್ಚು ಸಮಸ್ಯೆ ಅನುಭವಿಸಿದ್ದು ಮಹಿಳೆಯರು.
ಮಹಿಳೆಯರ ಮೇಲೆ ವಿಚಿತ್ರವಾದ ನಿರ್ಬಂಧಗಳನ್ನು ಹೇರಿ, ಇದು ಅವರ ರಕ್ಷಣೆಗಾಗಿ ಮಾಡಿರುವ ನಿಯಮಗಳು ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ. ಅಂತೆಯೇ ತಾಲಿಬಾನ್ ಮತ್ತೊಂದು ನಿಯಮ ಮಾಡಿದ್ದು, ಇದರ ಅನ್ವಯ ಇನ್ನು ಮುಂದೆ ಮಹಿಳೆಯರು ಪ್ರಯಾಣ ಮಾಡುವಾಗ ಜೊತೆಗೆ ಪುರುಷ ಸಂಬಂಧಿ ಇರಲೇಬೇಕಂತೆ!

ಹೌದು, ದೂರದ ಊರುಗಳಿಗೆ ಪ್ರಯಾಣ ಮಾಡುವಾಗ ಜೊತೆಗೆ ಪುರುಷ ಸಂಬಂಧಿ ಇರಲೇಬೇಕು, ಇಲ್ಲ ಎಂದಾದರೆ ರಸ್ತೆ ಸಾರಿಗೆಗೆ ಅನುಮತಿ ನೀಡಲಾಗುವುದಿಲ್ಲ. ಇದರ ಜೊತೆಗೆ ಮಹಿಳೆಯರು ಹೆಡ್‌ಸ್ಕಾರ್ಫ್ ಧರಿಸದೇ ಪ್ರಯಾಣಿಸಲು ಮುಂದಾದರೆ ಅಂಥವರಿಗೆ ಪ್ರವೇಶ ನಿರಾಕರಿಸಿ ಎಂದು ವಾಹನ ಮಾಲೀಕರಿಗೆ ತಾಲಿಬಾನಿಗಳು ಕರೆ ನೀಡಿದ್ದಾರೆ.

ಕೆಲಸಕ್ಕೆ ಹೋಗಲು ಮಹಿಳೆಯರಿಗೆ ಅವಕಾಶ ಇಲ್ಲ, ಓದಲು ಬಿಡುತ್ತಿಲ್ಲ, ಮೈತುಂಬ ಬಟ್ಟೆ ಹಾಕದೆ ಹೊರಗೆ ಬರುವಂತಿಲ್ಲ ಈಗಾಗಲೇ ಇಷ್ಟೆಲ್ಲಾ ನಿಯಮಗಳಿಂದ ಬೇಸತ್ತ ಮಹಿಳೆಯರ ಮೇಲೆ ಇನ್ನಷ್ಟು ನಿರ್ಬಂಧ ಹೇರಲಾಗುತ್ತದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳುತ್ತಲೇ ತಾಲಿಬಾನ್ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿಯುತ್ತಿದೆ.

ಹೊಸ ರೂಲ್ಸ್ ಅನ್ವಯ ಯಾವುದೇ ಮಹಿಳೆ 72 ಕಿ.ಮೀಗಳಷ್ಟು ದೂರ ಪ್ರಯಾಣಿಸಬೇಕು ಎಂದರೆ ಪುರುಷ ಸಂಬಂಧಿ ಇರಲೇಬೇಕು. ಜತೆಗೆ ಕಾರ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಸಂಗೀತ ಕೇಳಿಸಿಕೊಳ್ಳುವಂತೆಯೂ ಇಲ್ಲ ಎಂದು ತಾಲಿಬಾನಿಗಳು ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss