Wednesday, August 10, 2022

Latest Posts

ನಿಂಬುವಿನಲ್ಲಿದೆ ನೀರೆಯರ ಸೌಂದರ್ಯ ವೃದ್ಧಿ ಗುಣಗಳು!

ನಿಂಬೆ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಈ ನಿಂಬೆ ಚಿರಪರಿಚಿತ. ಅಡಿಗೆಗೂ ಸೈ, ಅಂದಕ್ಕೂ ಸೈ, ಮಾಟಮಂತ್ರಕ್ಕೂ ಸೈ. ನಿಂಬೆ ಹಣ್ಣಿ ಉಪಯೋಗ ತಿಳಿಯಲು ಒಂದು ದಿನ ಸಾಲುವುದೇ ಇಲ್ಲ. ಮಹಿಳೆಯರಿಗೆ ಅಂದ ಚೆಂದದ ಬಗ್ಗೆ ಬಹಳ ಆಸಕ್ತಿ ಇರುತ್ತದೆ. ಅಂದ ಹೆಚ್ಚಿಸುವಲ್ಲಿ ನಿಂಬೆ ಹಣ್ಣಿನ ಪಾತ್ರ ಕೂಡ ದೊಡ್ಡದು.

  • ಕೂದಲು ಪಳ ಪಳ ಹೊಳೆಯ ಬೇಕೆಂದರೆ ಮೊದಲು ಕೊಬ್ಬರಿ ಎಣ್ಣೆ ಮುತ್ತು ನಿಂಬೆ ರಸವನ್ನು ಕಲಸಿಕೊಂಡು ತಲೆ ಸ್ನಾನಕ್ಕೆ 2 ಗಂಟೆ ಇರುವಾಗ ಲಿಂಬು ಮತ್ತು ಕೊಬ್ಬರಿ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು 2 ಗಂಟೆ ನಂತರ ಸ್ನಾನ ಮಾಡಿದರೆ ಕೂದಲು ಹೊಳಪು ಬರುತ್ತದೆ.
  • ಮೊಡವೆ ಸಮಸ್ಯೆ ಇರುವವರು ಅರಿಶಿಣ ಮತ್ತು ನಿಂಬೆ ರಸವನ್ನು ಕಲಸಿಕೊಂಡು ಮೊಡವೇ ಆದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಒಂದು ವಾರದಲ್ಲಿ ಮೊಡವೆ ಮಾಯವಾಗುತ್ತದೆ.
  • ಮುಖ ಹೊಳಪು ಬರುವುದಕ್ಕೆ ನಿಂಬೆ ರಸಕ್ಕೆ ಜೇನುತುಪ್ಪವನ್ನು ಸೇರಿಸಿಕೊಂಡು ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಮುಖದ ಹೊಳಪು ಹೆಚ್ಚುತ್ತದೆ.
  • ತುಟಿ ಕಪ್ಪು ಬಣ್ಣದಲ್ಲಿದ್ದು, ಕೆಂಪು ಬಣ್ಣಕ್ಕೆ ತುಟಿ ತರಬೇಕೆಂದರೆ ಲಿಂಬೆ ರಸಕ್ಕೆ ಸಕ್ಕರೆಯನ್ನು ಸೇರಿಸಿಕೊಂಡು ಅದನ್ನು ತುಟಿಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ತುಟಿ ಕೆಂಪು ಬಣ್ಣಕ್ಕೆ ಬರುತ್ತದೆ. ಎರಡು ವಾರ ಮಾಡಬೇಕು.
  • ಅಪ್ಪರ್ ಲಿಪ್ಸ್ ಮೇಲಿರುವ ಕೂದಲನ್ನು ತೆಗೆಯಲು ನಿಂಬೆ ರಸಕ್ಕೆ ಅರಿಶಿಣವನ್ನು ಸೇರಿಸಿಕೊಂಡು ಹಚ್ಚಿಕೊಳ್ಳಬೇಕು. ಹಚ್ಚಿಕೊಂಡು ಅರ್ಧಗಂಟೆ ಬಿಡಬೇಕು. ಹೀಗೆ ಮಾಡುವುದರಿಂದ ಅಪ್ಪರ್ ಲಿಪ್ಸ್ ಮೇಲಿರುವ ಕೂದಲು ಹೊಗುತ್ತದೆ.
  • ವ್ಯಾಕ್ಸ್ ಮಾಡಿಕೊಳ್ಳಬೇಕೆಂದರೆ ಸಕ್ಕರೆ ಪಾಕವನ್ನು ಮಾಡಿಕೊಂಡು ಅದಕ್ಕೆ ನಿಂಬು ರಸ ಮಿಕ್ಸ್ ಮಾಡಿಕೊಳ್ಳಿ. ಆಗ ಅದು ಅಂಟು ಅಂಟಾಗುತ್ತದೆ. ಇದರ ಜೆಲ್‌ನಿಂದ ವ್ಯಾಕ್ಸ್ ಮಾಡಿಕೊಳ್ಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss