Saturday, July 2, 2022

Latest Posts

ಮನೆಗೆ ಬಂತು ಡಾಮಿನಾಸ್‌ನ ನಟ್ & ಬೋಲ್ಟ್ ಪಿಝಾ, ಇದನ್ನು ತಿನ್ನೋದಾದ್ರೂ ಹೇಗೆ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಬಂದ ನಂತರ ಜನ ಎಲ್ಲವನ್ನು ಮನೆಗೆ ಆರ್ಡರ್ ಮಾಡಿಕೊಳ್ಳುವ ಪದ್ಧತಿ ರೂಢಿ ಮಾಡಿಕೊಂಡಿದ್ದಾರೆ.
ಆಹಾರ ಇದಕ್ಕೆ ಹೊರತಲ್ಲ, ಅದರಲ್ಲೂ ಪಿಝಾ ಬರ್ಗರ್‌ಗಳು ಸೇಲ್‌ನಲ್ಲಿ ನಂಬರ್1 ಸ್ಥಾನದಲ್ಲಿವೆ.
ಅದೇ ರೀತಿ ಪಿಝಾ ಆರ್ಡರ್ ಮಾಡಿದ ಮಹಿಳೆಗೆ ಪಿಝಾ ಟಾಪಿಂಗ್ಸ್‌ನಲ್ಲಿ ನಟ್ ಹಾಗೂ ಬೋಲ್ಟ್ ಸಿಕ್ಕಿದೆ.
ಹೌದು, ಡಾಮಿನಾಸ್‌ನಲ್ಲಿ ಆರ್ಡರ್ ಮಾಡಿದ ಪಿಝಾದಲ್ಲಿ ನಟ್ ಹಾಗೂ ಬೋಲ್ಟ್ ಸಿಕ್ಕಿದ್ದು, ಇದು ಅಪಾಯಕಾರಿ. ದೊಡ್ಡವರಿಗೆ ತಿಳಿಯುತ್ತದೆ. ಮಕ್ಕಳು ತಿಂದಿದ್ದರೆ ಏನು ಗತಿ ಎಂದು ಮಹಿಳೆ ಪ್ರಶ್ನಿಸಿದ್ದಾರೆ.

ಮಹಿಳೆ ಪಿಝಾ ಆರ್ಡರ್ ಮಾಡಿದ್ದು, ಅರ್ಧ ಪಿಝಾ ಸವಿದ ನಂತರ ಬೋಲ್ಟ್, ನಟ್ ಪತ್ತೆಯಾಗಿದೆ. ಕೂಡಲೇ ಡಾಮಿನಾಸ್‌ಗೆ ಕರೆ ಮಾಡಿ, ಹಣ ರೀಫಂಡ್ ಮಾಡುವಂತೆ ಹೇಳಿದ್ದಾರೆ. ಜೊತೆಗೆ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಪಿಝಾ ಆರ್ಡರ್ ಮಾಡಿದ ಬಳಿಕ ಎರಡು ಬಾರಿ ಪರೀಕ್ಷಿಸಿ ನಂತರ ತಿನ್ನಿ. ಜಾಗರೂಕರಾಗಿರಿ’ ಎಂದಿದ್ದಾರೆ.

ಡಾಮಿನಾಜ್ ಮಹಿಳೆಗೆ ಕ್ಷಮೆ ಕೇಳಿದ್ದು, ಇನ್ನೆಂದೂ ಈ ರೀತಿ ಆಗೋದಿಲ್ಲ ಎಂದು ಹೇಳಿದೆ. ಸದ್ಯ ಪಿಝಾದಲ್ಲಿರುವ ನಟ್, ಬೋಲ್ಟ್ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಜನ ಪಿಝಾ ತಿನ್ನುವ ಮುಂಚೆ ಎರಡು ಬಾರಿ ಯೋಚಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss