- ಕಾವ್ಯಾ ಜಕ್ಕೊಳ್ಳಿ
ಪುರುಷರಿಗೆ ಹೋಲಿಸಿದ್ರೆ ಸಾಮಾನ್ಯವಾಗಿ ಮಹಿಳೆಯರಿಗೇ ಆಯುಸ್ಸು ಜಾಸ್ತಿ ಅಂತಾರೆ. ಇದೇ ವಿಷಯವಾಗಿಯೇ ಇಂಗ್ಲೆಂಡ್ನ ಥರ್ನ್ಹಾಮ್ ಮತ್ತು ಡೆಟ್ಲಿಂಗ್ ಎಂಬ ಊರು ಭಾರೀ ಖ್ಯಾತಿ ಪಡೆದಿದೆ.
ಹೌದು.. ಇಲ್ಲಿನ ಜನ ಅತಿ ಹೆಚ್ಚು ವರ್ಷ ಬದುಕುತ್ತಾರೆ.ಅದರಲ್ಲೂ ಪುರುಷರಿಗಿಂತ ಹೆಚ್ಚು ವರ್ಷ ಮಹಿಳೆಯರೇ ಬದುಕುತ್ತಾರೆ. ಅದೂ ಕೂಡ ಸುದೀರ್ಘಾಯುಷ್ಯ. ಅಂದ್ರೆ ಸುಮಾರು 95ರ ಆಸುಪಾಸಿನವೆರೆಗೂ ಬದುಕುತ್ತಿದ್ದಾರೆ. ಹಾಗಾಗಿಯೇ ಥರ್ನ್ಹಾಮ್ ಮತ್ತು ಡೆಟ್ಲಿಂಗ್ ಊರನ್ನಾ ಸುದೀರ್ಘಾಯುಷ್ಯಗಳ ಊರೆಂದು ಪರಿಗಣಿಸುತ್ತಾರೆ.
ನಮಗೆ ಹೆಚ್ಚು ವರ್ಷ ಬದುಕುವವರ ದೇಶ ಎಂದ ಕೂಡಲೇ ನಾಲಿಗೆ ತುದಿಗೆ ಬರುವುದು ಬ್ರಿಟನ್. ಇಲ್ಲಿನ ಜನರ ಸರಾಸರಿ ಆಯುಷ್ಯ 83 ವರ್ಷ. ಆದರೆ ಇಲ್ಲಿನ ಥರ್ನ್ಹಾಮ್ ಮತ್ತು ಡೆಟ್ಲಿಂಗ್ ಎಲ್ಲಕ್ಕಿಂತ ಒಂದು ಕೈ ಮೇಲಿದೆ. ಈ ಊರಿನಲ್ಲಿ ಪುರುಷರ ಸರಾಸರಿ ಆಯಸ್ಸು 86 ವರ್ಷ ಮತ್ತು ಮಹಿಳೆಯರ ಆಯಸ್ಸು 95 ವರ್ಷವಾಗಿದೆ. ಅಂದ್ರೆ ಇಲ್ಲಿ ಪುರುಷರು ಮಹಿಳೆಯರಿಗಿಂತ 9 ವರ್ಷ ಕಡಿಮೆ ಬದುಕುತ್ತಾರೆ.
ಈ ಎರಡು ಊರುಗಳಲ್ಲಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಮಾಡಲಾಗುತ್ತದೆ. ಹಾಗಾಗಿ ಇಲ್ಲಿ ಕಳೆದ ಏಳು ವರ್ಷಗಳಿಂದ ಧೂಮಪಾನ ನಿಷೇಧಿಸಲಾಗಿದೆ.
ನಾರ್ತ್ ಡೌನ್ಸ್ ಬಳಿ ಇರುವ ಡೆಟ್ಲಿಂಗ್ನಲ್ಲಿ ಕೇವಲ 800ರಷ್ಟು ಜನರಿದ್ದು, ಈ ಊರಿನ ಕೆಲವರು ಅತ್ಯಂತ ಹಿರಿಯ ನಾಗರಿಕರು ಎಂಬ ಬ್ರಿಟನ್ ಪಟ್ಟಿಯಲ್ಲಿ ಸೇರಿದ್ದಾರೆ. ಈ ಊರಿನಲ್ಲಿ ಎಂಟು ಮಂದಿ ವೈದ್ಯರಿದ್ದು, ಸರಾಸರಿ 100 ಮಂದಿಗೆ ಒಬ್ಬರಂತೆ ವೈದ್ಯರಿದ್ದಾರೆ.
ಅಂದಹಾಗೆ ಯಾಕೆ ಇಲ್ಲಿನವರು ಇಷ್ಟು ವರ್ಷ ಬದುಕುತ್ತಾರೆಂದು ಕೆಲವು ಅಧ್ಯಯನಗಳ ಮೂಲಕ ಬಹಿರಂಗವಾಗಿದ್ದು, ಇಲ್ಲಿ ವೈದ್ಯಕೀಯ ಸೇವೆಗಳ ಲಭ್ಯತೆ ಉತ್ತಮ ಮಟ್ಟದಲ್ಲಿದ್ದು, ಮತ್ತೆ ಕುಡಿಯು ನೀರು ಕೂಡ ಅತ್ಯಂತ ಶುದ್ಧವಾಗಿದೆ.
ಇದೇ ವರ್ಷದ ಏಪ್ರಿಲ್ನಲ್ಲಿ ಡೆಟ್ಲಿಂಗ್ ಊರಿನವರೇ ಆದ ಇರೇನೇ ನಾಬ್ಸ್ ತಮ್ಮ 102ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಬಗ್ಗೆ ಇರೇನೇ ನಾಬ್ಸ್ ಅವರೇ ತಮ್ಮ ಧೀರ್ಘಾಯುಷ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
“ಸದಾ ಕ್ರಿಯಾಶೀಲಳಾಗಿರುವ ಕಾರಣ ನಾನು ಇಷ್ಟು ದೀರ್ಘವಾದ ಬದುಕು ಸವೆಸಿದ್ದೇನೆ. ಇಲ್ಲಿನ ವಾತಾವರಣ ಕೂಡ ಆರೋಗ್ಯವಾಗಿರಲು ಹಿತವಾಗಿದ್ದು, ಗುಡ್ಡ ಪ್ರದೇಶದ ನೀರಿನ ಗುಣಮಟ್ಟ ಹಾಗೂ ಶುದ್ಧ ಗಾಳಿ ಇದಕ್ಕೆ ಪ್ರಮುಖ ಕಾರಣವಾಗಿದೆ” ಎಂದು ಹೇಳುತ್ತಾರೆ ನಾಬ್ಸ್.