MUST READ | ಡೆಲಿವರಿ ನಂತರ ಮಹಿಳೆಯರಿಗೆ ಬೇಕು ಹೆಚ್ಚು ಕಾಳಜಿ, ಗಂಡಂದಿರು ಇದನ್ನು ಓದಲೇಬೇಕು..

ಗರ್ಭಿಣಿಯ ಕಾಳಜಿ ಎಷ್ಟು ಮಾಡುತ್ತೀರೋ ಮಗು ಹುಟ್ಟಿದ ನಂತರ ಅದಕ್ಕಿಂತ ಹೆಚ್ಚು ಕಾಳಜಿ ಮಾಡುವುದು ತುಂಬಾನೇ ಮುಖ್ಯ. ನಿಮ್ಮ ಜೀವನ ನಾರ್ಮಲ್ ಆಗಿಯೇ ಇರುತ್ತದೆ. ಹೆಚ್ಚು ದುಡಿಯಬೇಕು, ಆರ್ಥಿಕವಾಗಿ ಸಪೋರ್ಟ್ ಮಾಡಬೇಕು ಎನ್ನುವುದು ನಿಮ್ಮ ಮೊದಲ ಯೋಚನೆ ಆಗುತ್ತದೆ. ಆದರೆ ಇದಕ್ಕಿಂತ ಮುಖ್ಯ ನಿಮ್ಮ ಹೆಂಡತಿ ಹಾಗೂ ಮಗುವಿನ ಆರೋಗ್ಯ

ಮನೆಯಲ್ಲಿ ನೆಮ್ಮದಿ ಇದ್ದರೆ ತಾನೆ ನೀವು ಹೊರಗೆ ನೆಮ್ಮದಿಯಾಗಿ ದುಡಿಯಲು ಸಾಧ್ಯ? ನಿಮಗೆ ಹೇಗೆ ಎಲ್ಲವೂ ಹೊಸತೋ ಆಕೆಗೂ ಎಲ್ಲವೂ ಹೊಸತು. ಮೊದಲ ಬಾರಿ ಆಕೆಯೂ ತಾಯಿಯಾಗಿದ್ದಾಳೆ.

ಆಕೆಯನ್ನು ಕಾಳಜಿ ಮಾಡೋದು ಹೀಗೆ..

  • ಆಕೆಗೆ ಬಹುಮುಖ್ಯವಾಗಿ ಬೇಕಿರೋದು ಮಾನಸಿಕವಾಗಿ ಯಾರಾದರೂ ಜೊತೆಗಿರೋದು, ಸದಾ ಜೊತೆಯಲ್ಲಿರಿ.
  • ಇದೆಲ್ಲ ಹೆಣ್ಣುಮಕ್ಕಳ ವಿಚಾರ ಅವರು ನೋಡಿಕೊಳ್ತಾರೆ ಎನ್ನುವ ಭಾವನೆ ಬೇಡ, ಮಗು, ಪತ್ನಿ ಇಬ್ಬರೂ ನಿಮ್ಮವರೇ ಅವರ ಬಗ್ಗೆ ಗಮನ ಹರಿಸಿ.
  • ಹಿಂದಿನ ಕಾಲದವರ ರೀತಿ ನೀತಿಗಳನ್ನು ಒಪ್ಪದೆ ಆಕೆ ಸೈನ್ಸ್ ಬಗ್ಗೆ ಮಾತನಾಡಬಹುದು, ಗೂಗಲ್ ಮಾಡಿ ತೋರಿಸುತ್ತೇನೆ ಎನ್ನಬಹುದು. ಅವಳ ಮಾತಿಗೆ ಬೆಲೆ ಕೊಡಿ.
  • ಮಗುವಿನ ಆರೈಕೆ ವೇಳೆ ಆಕೆ ಕೆಲವು ತಪ್ಪು ಮಾಡಿದರೆ ಅದಕ್ಕೆ ಕ್ಷಮೆ ಇರಲಿ, ಎಲ್ಲರಿಗೂ ಇದು ಹೊಸತು.
  • ಹೆಂಡತಿ ಜೊತೆ ಮಲಗುವಂತಿಲ್ಲ, ಅವಳು ಒಬ್ಬಳೇ ರೂಮ್‌ನಲ್ಲಿ ತಿನ್ನಬೇಕು ಇಂಥ ಸಾವಿರ ನಿಯಮಗಳು ಇರಬಹುದು. ಎಲ್ಲದರಲ್ಲೂ ನೀವು ಜೊತೆಗಿರಿ.
  • ಮುಖ್ಯವಾಗಿ ಅವಳಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಿ ಆಕೆಯ ಪ್ರೆಗ್ನೆನ್ಸಿ ಹಾರ್ಮೋನ್ಸ್ ಇನ್ನೂ ದೇಹದಲ್ಲೇ ಇದೆ ನೆನಪಿರಲಿ.
  • ಅವಳ ಮೂಡ್ ಸರಿಯಿಲ್ಲದೆ ನಾಲ್ಕು ಮಾತು ಹೆಚ್ಚು ಆಡಿದರೆ ಅದನ್ನು ಮನ್ನಿಸಿ, ಮೂಡ್ ಸ್ವಿಂಗ್ಸ್ ಎಂದು ಸುಮ್ಮನಾಗಿ.
  • ಮಾಮೂಲಿಗಿಂತ ಅತಿ ಹೆಚ್ಚು ಪ್ರೀತಿ ಮಾಡಿ.
  • ಲೈಂಗಿಕ ಕ್ರಿಯೆ ಬಗ್ಗೆ ಓಪನ್ ಆಗಿ ಮಾತನಾಡಿ, ಅವಳ ಒಪ್ಪಿಗೆ ಪಡೆದು ಮುಂದುವರಿಯಿರಿ.
  • ನಿದ್ದೆ ಆಕೆ ಮಾತ್ರ ಗೆಡಬೇಕು ಎಂದೇನಿಲ್ಲ, ಆಕೆಯ ಜೊತೆ ನೀವು ಮಗುವನ್ನು ನೋಡಿಕೊಳ್ಳಬಹುದು. ಇದು ಅವಳ ಡ್ಯೂಟಿ ಮಾತ್ರ ಅಲ್ಲ.
  • ಮಗು ಇರುವುದು, ಸದಾ ಫೀಡಿಂಗ್, ಪ್ರೈವೆಸಿ ಇಲ್ಲದಿರುವುದು, ಎಲ್ಲೂ ಹೋಗಲು ಆಗದೇ ಇರುವುದು ಎಲ್ಲವೂ ನಾರ್ಮಲ್ ಎಂದು ಆಕೆಗೆ ಹೇಳಿ.
  • ವರ್ಕ್ ಫ್ರಮ್ ಹೋಂ ಅಥವಾ ರಜೆ ಆಪ್ಷನ್ ಇದ್ದರೆ ಈಗ ಬಳಸಿಕೊಳ್ಳಿ. ನೀವು ಒಂದು ಕಡೆ, ಆಕೆ ತವರು ಮನೆ ಇದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು.
  • ಆಕೆಗೆ ಇಷ್ಟದ ಊಟ ಮಾಡಿಕೊಡಿ, ಮಗುವನ್ನು ಆಗಾಗ ನೀವೇ ಎತ್ತುಕೊಳ್ಳಿ. ತಂದೆ ಡ್ಯೂಟಿ ನಿಭಾಯಿಸಿ.
  • ಆಗಾಗ ನೀನು ಒಳ್ಳೆಯ ತಾಯಿ, ನೀನಿಲ್ಲದೆ ನನಗೆ ಏನು ಮಾಡೋಕೆ ಆಗೋದಿಲ್ಲ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಲೇ ಇರಿ.
  • ನಾನು ಮಗು ನೋಡಿಕೊಳ್ಳುತ್ತೇನೆ ಆರಾಮಾಗಿ ವಾಕ್ ಮಾಡಿ ಬಾ, ಸ್ನಾನ ಮಾಡಿಕೊಂಡು ಬಾ, ಸ್ನೇಹಿತರ ಜೊತೆ ಮಾತನಾಡು ಎಂದು ಬಿಡಿ.
  • ಊಟ ತಿಂಡಿ ಸ್ನ್ಯಾಕ್ಸ್ ಮಾತ್ರೆ ತೆಗೆದುಕೊಳ್ಳಲು ನೆನಪು ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!