Wednesday, August 17, 2022

Latest Posts

ಯಾವಾಗ, ಯಾರು ಬೇಕಾದರೂ, ಯಾವ ಕಾರಣಕ್ಕಾದರೂ ಅಟ್ಯಾಕ್ ಮಾಡಬಹುದು… ಈ Gadgets ಸದಾ ನಿಮ್ಮ ಬಳಿ ಇರಲಿ!

ಮೇಘನಾ ಶೆಟ್ಟಿ, ಶಿವಮೊಗ್ಗ

ಕಾಲ ಎಷ್ಟೇ ಮುಂದುವರಿದಿದ್ದರೂ ಈಗಲೂ ಮಧ್ಯರಾತ್ರಿ ಓಡಾಡೋದಕ್ಕೆ ಹೆಣ್ಣುಮಕ್ಕಳು ಹೆದರುತ್ತಾರೆ. ಹಗಲು ಜೀವನದಲ್ಲಿ ನೀವೆಷ್ಟೇ ಧೈರ್ಯಶಾಲಿ ಮಹಿಳೆ ಆಗಿದ್ದರೂ, ನಾಲ್ಕು ಗಂಡಸರ ಫಿಸಿಕಲ್ ಪವರ್‌ನ್ನು ತಡೆಯೋದಕ್ಕೆ ಒಬ್ಬ ಮಹಿಳೆಗೆ ಸಾಧ್ಯ ಆಗೋದಿಲ್ಲ.

ಭಾರತದಲ್ಲಿ ಇದೇ ವರ್ಷ 833  ರೇಪ್ ಕೇಸ್ ದಾಖಲಾಗಿದೆ. ಕಳೆದ ವರ್ಷ 580 ಕೇಸ್ ದಾಖಲಾಗಿತ್ತು. ರೇಪ್ ನಂತರ ಧೈರ್ಯ ಮಾಡಿ ಕ್ರೂರಿಗಳ ವಿರುದ್ಧ ಹೋರಾಡೋದಕ್ಕೆ ಮುಂದೆ ಬಂದವರ ಸಂಖ್ಯೆ ಮಾತ್ರ ನಮಗೆ ಗೊತ್ತು. ಆದರೆ ‘ಪೊಲೀಸರ ಬಳಿ ಹೋದರೆ ಕುಟುಂಬಕ್ಕೇನು ಮಾಡ್ತಾರೆ?’,  ‘ಮರ್ಯಾದೆ ಪ್ರಶ್ನೆ’ ಎಂದೆಲ್ಲಾ ಎಷ್ಟೋ ಹೆಣ್ಣುಮಕ್ಕಳು ಮನೆಯ ಮೂಲೆ ಹಿಡಿದು ಕುಳಿತಿದ್ದಾರೆ. ಮಾನಸಿಕವಾಗಿ ಈಗಲೂ ಬೇಯುತ್ತಿದ್ದಾರೆ.

ಸಿಟಿಯಲ್ಲಿ ದಿನವೂ ಕೆಲಸಕ್ಕೆ ಹೋಗಿ ಬರುವ, ಪಾರ್ಟಿ, ಶಾಪಿಂಗ್‌ಗೆ ರಾತ್ರಿ ಓಡಾಡುವ, ಒಟ್ಟಾರೆ ಎಲ್ಲ ಹೆಣ್ಣುಮಕ್ಕಳು ತಮ್ಮ ಜೊತೆ ಈ ಟೆಕ್ನಾಲಜಿಕಲ್ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಟೆಕ್ನಾಲಜಿ ಮುಂದುವರಿದು, ಇಷ್ಟೆಲ್ಲಾ ಇನ್ನೋವೇಶನ್ಸ್ ಆದರೂ ಇವುಗಳನ್ನು ಖರೀದಿ ಮಾಡಿ ಪರ್ಸ್‌ನಲ್ಲಿ ಇಟ್ಟುಕೊಳ್ಳಲು ಮಹಿಳೆಯರು ಹಿಂದು ಮುಂದು ನೋಡುತ್ತಾರೆ. ಯಾವ ಗ್ಯಾಡ್ಜೆಟ್ಸ್ ? ಇದರ ಮಹತ್ವ ಏನು ನೋಡೋಣ ಬನ್ನಿ…

SAFELET: ಇದು ನೋಡೋದಕ್ಕೆ ಹೆಣ್ಣುಮಕ್ಕಳು ಧರಿಸುವ ಬ್ರೇಸ್ಲೆಟ್ ರೀತಿ ಇರುತ್ತದೆ. ಹೆದರಿಕೆ ಆದ ಸಮಯದಲ್ಲಿ ಇದರ ಬಟನ್ ಒತ್ತಿದರೆ ನೀವು ಅದರಲ್ಲಿ ಮೊದಲೇ ಫೀಡ್ ಮಾಡಿರುವ ಎಮರ್ಜೆನ್ಸಿ ಸಂಖ್ಯೆಗೆ ಕಾಲ್ ಹೋಗುತ್ತದೆ. ಜೊತೆಗೆ ಆಡಿಯೋ ಕೂಡ ರೆಕಾರ್ಡ್ ಆಗುತ್ತದೆ.

safelet_image
PEPPER SPRAY PISTOL: ಇದು ಗನ್ ರೀತಿ ಇರುವ ಪೆಪ್ಪರ್ ಸ್ಪ್ರೇ. ಇದನ್ನು ಕಣ್ಣಿಗೆ ಮಾತ್ರ ಹಾಕಬೇಕು ಎಂದೇನಿಲ್ಲ. ದೇಹದ ಯಾವ ಭಾಗಕ್ಕೆ ಹಾಕಿದರೂ ಸಿಕ್ಕಾಪಟ್ಟೆ ಉರಿ ಆರಂಭವಾಗುತ್ತದೆ. ಸರಿಯಾಗಿ ಏಮ್ ಮಾರಿ ಒಮ್ಮೆ ಸ್ಪ್ರೇ ಮಾಡಿ ತಪ್ಪಿಸಿಕೊಳ್ಳಿ. ನೆನಪಿಡಿ, ಆರು ಸೆಕೆಂಡ್‌ಗಳ ಕಾಲ ಸ್ಪ್ರೇ ಒತ್ತಿ ಹಿಡಿದರೆ ಸ್ಪ್ರೇ ಖಾಲಿ ಆಗುತ್ತದೆ.

pepper_spray_pistol_image

CURRENT FLASHLIGHT: ಈ ಚಾರ್ಜ್‌ಲೈಟ್‌ನ್ನು ಮನೆಯಲ್ಲಿ ಚಾರ್ಜ್ ಮಾಡಬಹುದು. ಲೈಟ್ ಜೊತೆಗೆ ಶಾಕ್ ಕೂಡ ಆಗುತ್ತದೆ. ಇದರಿಂದ ಅಟ್ಯಾಕ್ ಮಾಡಲು ಬಂದವರಿಗೆ ಕರೆಂಟ್ ಶಾಕ್ ಹೊಡೆದು ನೋವಾಗುತ್ತದೆ. ತಕ್ಷಣ ನೀವು ಓಡಿಹೋಗಬಹುದು.

lipstick_shaped_flashlight_image
SAFETY RODS: ಈ ರಾಡ್‌ಗಳನ್ನು ಬ್ಯಾಗ್‌ನಲ್ಲಿ ಕ್ಯಾರಿ ಮಾಡಬಹುದು. ರಾಡ್‌ನಲ್ಲಿ ಹೊಡೆದರೆ ಶಾಕ್ ಕೂಡ ಆಗುತ್ತದೆ. ಜೊತೆಗೆ ನೋವಿಗೆ ಎದುರಾಳಿ ಒದ್ದಾಡುತ್ತಾರೆ.

Buy Self Defense Safety Rod Online | Best Prices in India: Rediff Shopping
SMART PENDANT:
ಈ ಪೆಂಡೆಂಟ್ ನಿತ್ಯವೂ ಧರಿಸಿ. ಇದರಲ್ಲಿ ಒಂದು ಬಟನ್ ಇದೆ. ಡೇಂಜರ್ ಸಮಯದಲ್ಲಿ ನೀವು ಬಟನ್ ಒತ್ತಿದರೆ ಇದು ನೀವು ಈಗಾಗಲೇ ಫೀಡ್ ಮಾಡಿರುವ ಸಂಖ್ಯೆಗಳಿಗೆ ಕರೆ ಹೋಗುತ್ತದೆ. ಜೊತೆಗೆ ಜಿಪಿಎಸ್ ಕೂಡ ಇರುವುದರಿಂದ ನೀವು ಎಲ್ಲಿದ್ದೀರಿ ಎನ್ನುವುದನ್ನು ಟ್ರಾಕ್ ಮಾಡಬಹುದು.

safer_smart_pendant_imagePERSONAL ALARM: ಇದು ನೋಡಲು ಕೀ ಬಂಚ್ ರೀತಿ ಇರುತ್ತದೆ. ಈ ಡಿವೈಸ್‌ನಲ್ಲಿ ಅಲಾರಾಂ ಇದೆ. ಲೈಟ್ ಕೂಡ ಇದೆ. ಏನಾದರೂ ಡೇಂಜರ್ ಕಾಣಿಸಿದರೆ ಇದನ್ನು ಒತ್ತಬಹುದು. ಆಗ ಆಗುವ ಅಲಾರಾಂ ಸದ್ದಿಗೆ ಅಟ್ಯಾಕರ್ ಹೆದರುತ್ತಾರೆ.

personal_alarm_wristlet_with_whistle_imageREVOLAR: ರಿವೋಲರ್‌ನನ್ನು ಈಸಿಯಾಗಿ ಎಲ್ಲಿ ಬೇಕಲ್ಲಿ ಕ್ಯಾರಿ ಮಾಡಬಹುದು. ಸ್ಪೋರ್ಟ್ ಬ್ರಾ ಒಳಗೂ ಇದನ್ನು ಹಾಕಿಕೊಳ್ಳಬಹುದು. ಇದನ್ನು ಎರಡು ಬಾರಿ ಒತ್ತಿದರೆ ಯೆಲ್ಲೋ ಅಲರ್ಟ್ ಮೂರು ಬಾರಿ ಒತ್ತಿದರೆ ರೆಡ್ ಅಲರ್ಟ್ ಎಂದು ನೀವು ಆಯ್ಕೆ ಮಾಡಿದ ಸಂಖ್ಯೆಗೆ ಸಂದೇಶ ಹೋಗುತ್ತದೆ.

revolar_image

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!