Friday, August 12, 2022

Latest Posts

ಬರೋಬ್ಬರಿ 22 ಸಾವಿರ ರೂ. ಕೊಟ್ಟು ಹೇರ್ ಕಟ್ ಮಾಡಿಸಿಕೊಂಡ ಬಳಿಕ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಲೂನ್ ಗೆ ಹೋದರೆ ಮಹಿಳೆಯರು ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತು. ಆದರೆ ಈಕೆಗೆ ಸಲೂನ್ ನವರು ಬರೋಬ್ಬರಿ 22 ಸಾವಿರ ರೂ. ಪಂಗನಾಮ ಹಾಕಿದ್ದಾರೆ.
@icarlyreboot ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಅಕೌಂಟ್ ಹೊಂದಿರುವ ಮಹಿಳೆ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಈಕೆ ಹೇರ್ ಕಟ್ ಮಾಡಿಸಿಕೊಂಡ ಬಳಿಕ ಕಾರಿನಲ್ಲಿ ಬಂದು ತನ್ನ ಮುಖ ನೋಡಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಕೆ ನಾನು ಈ ಹೇರ್ ಕಟ್ ನಲ್ಲಿ ವ್ಯಾನ್ ಡ್ರೈವರ್ ನಂತೆ ಕಾಣುತ್ತಿದ್ದೇನೆ. ಈ ಹೇರ್ ಕಟ್ ಗೆ ನಾನು 22 ಸಾವಿರ ರೂ ಖರ್ಚು ಮಾಡಬೇಕಿತ್ತಾ ಎಂದು ಅತ್ತಿದ್ದಾಳೆ. ಈ ಬಳಿಕ ಆಕೆ ಸಲೂನ್ ಸಿಬ್ಬಂದಿಯೊಂದಿಗೆ ಮಾತನಾಡಲು ಹೋಗಿದ್ದಾಳೆ ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ.
ದೇವರು ಯಾಕೆ ನನ್ನನ್ನು ದ್ವೇಶಿಸುತ್ತಾನೆ ಎಂದು ಸಂಕಟ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss