ಹೊಸದಿಗಂತ ಆನ್ಲೈನ್ ಡೆಸ್ಕ್:
2011 ಜಪಾನ್ನಲ್ಲಿ ಸಂಭವಿಸಿದ ಭೀಕರ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಅವಶೇಷ ಇದೀಗ ಪತ್ತೆಯಾಗಿದೆ.
ಬರೋಬ್ಬರಿ 10 ವರ್ಷದ ನಂತರ ಮಹಿಳೆಯ ಅಸ್ಥಿ ಪಂಜರ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಿಯಾಗಿಯ ಈಶಾನ್ಯ ಕಡಲತೀರದಲ್ಲಿ ಫೆ.17 ರಂದು ತಲೆಬುರುಡೆ ಸೇರಿದಂತೆ ಅಸ್ಥಿಪಂಜರ ಪತ್ತೆಯಾಗಿದೆ. ಇದು 2011 ಮಾರ್ಚ್ನಲ್ಲಿ ನಾಪತ್ತೆಯಾಗಿದ್ದ ನಾಟ್ಸುಕೋ ಒಕ್ಯುಹಾಮಾ ಎಂಬ ಮಹಿಳೆಯ ಅಸ್ಥಿಪಂಜರ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾನಿಯಲ್ಲಿ ಎಷ್ಟೋ ಮಂದಿ ನಾಪತ್ತೆಯಾಗಿದ್ದರು. ಎಷ್ಟೋ ಜನರ ದೇಹವೂ ಸಿಗಲಿಲ್ಲ. ಇದೀಗ ತಾಯಿಯ ಅಸ್ಥಿ ಸಿಕ್ಕಿದ್ದಕ್ಕೆ ಮಗ ಧನ್ಯವಾದ ಹೇಳಿದ್ದಾನೆ.