ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಏಷ್ಯಾಕಪ್ ಟೂರ್ನಿ ಇಂದಿನಿಂದ ಆರಂಭವಾಗಲಿದ್ದು, ಭಾರತ ಶ್ರೀಲಂಕಾದ ವಿರುದ್ಧ ಮೊದಲ ಪಂದ್ಯ ಆಡಲಿದೆ. ಟಿ 20 ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದ, ಮೊದಲು ಬಾಂಗ್ಲಾದೇಶ ಹಾಗೂ ಥೈಲೆಂಡ್ ಸೆಣೆಸಾಡಲಿದೆ, ಇನ್ನೊಂದು ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಎದುರಾಗಲಿದೆ.
ಬಾಂಗ್ಲಾದೇಶದ ಸೈಲೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈ ಬಾರಿ ವಿನ್ನರ್ ಆಗುವ ತವಕದಲ್ಲಿ ಟೀಂ ಇಂಡಿಯಾ ಸೆಣೆಸಾಡಲಿದೆ. ಈವರೆಗೆ ಏಳು ಬಾರಿ ಮಹಿಳಾ ಏಷ್ಯಾಕಪ್ ಆವೃತ್ತಿ ನಡೆದಿದ್ದು, ಆರು ಬಾರಿ ಭಾರತ ಚಾಂಪಿಯನ್ ಆಗಿದೆ. ಕಳೆದ ಬಾರಿ ಬಾಂಗ್ಲಾ ಚಾಂಪಿಯನ್ ಆಗಿದ್ದು, ಮತ್ತೆ ಮೊದಲ ಸ್ಥಾನಕ್ಕೆ ಬರಲು ಭಾರತ ತವಕದಲ್ಲಿದೆ.