Monday, August 8, 2022

Latest Posts

ಕಾವೇರಿ ನದಿಯಲ್ಲಿ ಮಹಿಳೆ ಶವ ಪತ್ತೆ: ಹತ್ಯೆ ಶಂಕೆ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೆ.ಆರ್. ಪೇಟೆ:

ಮಹಿಳೆಯೊಬ್ಬಳನ್ನು ಹತ್ಯೆಗೈದು ಶವವನ್ನು ಟಾರ್ಪಾಲಿನಿಂದ ಸುತ್ತಿ ಹಗ್ಗ ಕಟ್ಟಿ ಕಾವೇರಿ ನದಿಗೆ ಬಿಸಾಡಿರುವ ಘಟನೆ ತಾಲೂಕಿನ ಸಂಗಾಪುರ ಬಳಿ ಪತ್ತೆಯಾಗಿದೆ.
ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆಗೈದು ಶವಕ್ಕೆ ಟಾರ್ಪಾಲ್ ಸುತ್ತಿ ಹಗ್ಗದಿಂದ ಕಟ್ಟಿ ಬಿಸಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಪಟ್ಟಣದ ಶವಾಗಾರದಲ್ಲಿರಿಸಿದ್ದಾರೆ. ಕೆಂಪು, ಹಳದಿ ಬಣ್ಣದ ಟಾರ್ಪಾಲಿನಲ್ಲಿ ಸುತ್ತಿ ಹಗ್ಗದಿಂದ ಕಟ್ಟಿದ್ದಾರೆ. ಮಹಿಳೆ ನೇರಳೆ ಬಣ್ಣದ ಸ್ವೆಟರ್, ಕೆಂಪು ಬಣ್ಣದ ನೈಟಿ ಧರಿಸಿದ್ದು, ಕಿವಿಯಲ್ಲಿ ಓಲೆ ಹಾಗೂ ಕತ್ತಲ್ಲಿ ತಾಳಿ ಧರಿಸಿದ್ದಾರೆ.
ಮಹಿಳೆಯ ಬಗ್ಗೆ ಮಾಹಿತಿ ದೊರೆತದಲ್ಲಿ ಕೆ.ಆರ್. ಪೇಟೆ ಗ್ರಾಮಾಂತರ ಠಾಣೆ ಪಿಎಸ್‌ಐ ಮೊ. 9480804860, ಮಂಡ್ಯ ಕಂಟೋಲ್ ರೂಂ 08232 224888 ಸಂಖೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss