ಮಹಿಳಾ ಹಾಕಿ ವಿಶ್ವಕಪ್​: ಕೆನಡಾ ವಿರುದ್ಧ ಮೊದಲ ಜಯ ದಾಖಲಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳಾ ಹಾಕಿ ವಿಶ್ವಕಪ್​ನಲ್ಲಿ ಭಾರತೀಯ ತಂಡ ಕೆನಡಾ ವಿರುದ್ದ 3-2 ಗೋಲು​ಗಳಿಂದ ಜಯಗಳಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ.
ತಂಡದ ನಾಯಕಿ ಹಾಗೂ ಗೋಲ್​ ಕೀಪರ್​ ಸವಿತಾ ಅವರ ಅದ್ಭುತ ಗೋಲ್​ಕೀಪಿಂಗ್‌ನಿಂದಾಗಿ ಕೆನಡಾ ಪೆನಾಲ್ಟಿ ಶೂಟೌಟ್‌ಗಳನ್ನು​ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಈ ಮ್ಮಲ್ಕಾ ಭಾರತ ಗೆಲುವು ತನ್ನದಾಗಿಸಿಕೊಂಡಿತು.
ಮೊದಲಾರ್ಧದ ಸಮಯದಲ್ಲಿ 1-1 ಗೋಲ್​ನೊಂದಿಗೆ ಎರಡು ತಂಡಗಳು ಸಮಬಲ ಸಾಧಿಸಿದ ತಂಡ, ನಂತರ ಪೆನಾಲ್ಟಿ ಶೂಟ್​ನಲ್ಲಿ ಭಾರತ 2 ಗೋಲ್​ಗಳನ್ನು ಸಾಧಿಸುವ ಮುಖೇನ ಗೆಲುವು ಖಾತ್ರಿಪಡಿಸಿಕೊಂಡಿತು.
ಈಗಾಗಲೇ ವಿಶ್ವಕಪ್​ನಿಂದ ಹೊರಬಿದ್ದಿರುವ ಭಾರತ ಜುಲೈ 13ಕ್ಕೆ ಕೊನೆಯ ಪಂದ್ಯವನ್ನು ಜಪಾನ್ ವಿರುದ್ಧ​ ಆಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!