ಮಹಿಳಾ ಐಪಿಎಲ್‌ ಹರಾಜು ಪ್ರಕ್ರಿಯೆ ಮುಕ್ತಾಯ: ಅದಾನಿ ಪಾಲಾದ ಅಹಮದಾಬಾದ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಐಪಿಎಲ್‌(WIPL 2023) ಟೂರ್ನಿಯ ತಂಡಗಳ ಹರಾಜು ಪ್ರಕ್ರಿಯೆ ಮುಕ್ತಾಯ ಕಂಡಿದೆ. ಅದಾನಿ ಸಮೂಹ ಅಹಮದಾಬಾದ್​ ಫ್ರಾಂಚೈಸಿಯನ್ನು 1,289 ಕೋಟಿ. ರೂ. ಮೊತ್ತಕ್ಕೆ ಖರೀದಿ ಮಾಡಿದೆ.

ಮುಂಬಯಿಯಲ್ಲಿ ಬುಧವಾರ(ಜ.25) ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಈ ಐದು ತಂಡಗಳಲ್ಲಿ 3 ತಂಡಗಳನ್ನು ಪುರಷರ ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿವೆ. ಒಟ್ಟಾರೆ 5 ತಂಡಗಳ ಹರಾಜಿನಿಂದ ಬಿಸಿಸಿಐ ಬರೋಬ್ಬರಿ 4669.99 ಕೋಟಿ ರೂ. ಆದಾಯ ಗಳಿಸಿದೆ.

ಅದಾನಿ ಸ್ಪೋರ್ಟ್ಸ್​ಲೈನ್- ಅಹಮದಾಬಾದ್ (1‌,289 ಕೋಟಿ ರೂ.)
ಇಂಡಿಯಾವಿನ್ ಸ್ಪೋರ್ಟ್ಸ್​- ಮುಂಬೈ (912. 99 ಕೋಟಿ ರೂ.)​
ರಾಯಲ್ ಚಾಲೆಂಜರ್ಸ್​ ಬೆಂಗಳೂರು- ಬೆಂಗಳೂರು ( 901 ಕೋಟಿ ರೂ.)
ಜೆಎಸ್​ಡಬ್ಲ್ಯು ಜಿಆರ್​ಎಮ್​ ಗ್ರೂಪ್- ಡೆಲ್ಲಿ (810 ಕೋಟಿ ರೂ.)
ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್​- ಲಕ್ನೋ (757 ಕೋಟಿ ರೂ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!