Sunday, April 18, 2021

Latest Posts

ಅತ್ಯಾಚಾರ, ಲೈಂಗಿಕ ಹಿಂಸಾಚಾರಗಳಿಗೆ ಮಹಿಳೆಯರ ಉಡುಪು ಕಾರಣ: ವಿವಾದಾತ್ಮಕ ಹೇಳಿಕೆ ನೀಡಿದ ಇಮ್ರಾನ್ ಖಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ಪ್ರಕರಣಗಳಿಗೆ ಮಹಿಳೆಯರ ಉಡುಪು ಕಾರಣ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿವಾದ ಸೃಷ್ಟಿಸಿದ್ದಾರೆ.
ತಮ್ಮ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರದ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ್ದ ಇಮ್ರಾನ್ ಖಾನ್, ಇದರಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳನ್ನು ಕಾನೂನು ಮಾತ್ರವೇ ಪರಿಹರಿಸಲಾರದು ಎಂದಿದ್ದಾರೆ.
ಇಸ್ಲಾಂನಲ್ಲಿನ ಪರ್ದಾ ಪರಿಕಲ್ಪನೆಯು ಆಕರ್ಷಣೆಯನ್ನು ನಿಯಂತ್ರಿಸುವಂತೆ ಮಾಡುತ್ತದೆ. ತಮ್ಮ ಬಯಕೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅದು ತಾನಾಗಿಯೇ ಒಂದು ಮಾರ್ಗದಲ್ಲಿ ಅಥವಾ ಇನ್ನೊಂದು ರೀತಿ ತಣಿಯಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್, ಟ್ವಿಟ್ಟರ್‌ನಲ್ಲಿ ಕುರಾನ್‌ನ ನುಡಿಯೊಂದನ್ನು ಉಲ್ಲೇಖಿಸಿದ್ದು, ‘ಪುರುಷರು ತಮ್ಮ ಕಣ್ಣುಗಳನ್ನು ನಿರ್ಬಂಧಿಸಲು ಮತ್ತು ತಮ್ಮ ಖಾಸಗಿ ಅಂಗಗಳನ್ನು ಕಾಪಾಡಲು ಹೇಳಿ. ಜವಾಬ್ದಾರಿ ಇರುವುದು ಪುರುಷರ ಮೇಲೆ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ತಾವು 70ರ ದಶಕದಲ್ಲಿ ಕ್ರಿಕೆಟ್ ಆಡಲು ಬ್ರಿಟನ್‌ಗೆ ತೆರಳಿದ್ದ ಸಂದರ್ಭವನ್ನು ನೆನಪಿಸಿಕೊಂಡಿರುವ ಇಮ್ರಾನ್ ಖಾನ್, ಆ ಸಮಯದಲ್ಲಿ ಲೈಂಗಿಕತೆ, ಡ್ರಗ್ಸ್ ಮತ್ತು ಮೋಜು ಮಸ್ತಿ ಸಂಸ್ಕೃತಿ ತೀವ್ರವಾಗಿತ್ತು. ಪಾಕಿಸ್ತಾನದಲ್ಲಿ ಲೈಂಗಿಕ ಹಿಂಸಾಚಾರಗಳು ಹೆಚ್ಚಲು ದೂಷಿಸಬೇಕಿರುವುದು ಅಶ್ಲೀಲತೆಯನ್ನು ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss