Wednesday, August 10, 2022

Latest Posts

ಮಾ.20 ರಂದು ಮಡಿಕೇರಿಯಲ್ಲಿ ಮಹಿಳೆಯರಿಗಾಗಿ ‘ಕಿರು ಕಥಾ ಸ್ಪರ್ಧೆ’

ಹೊಸದಿಗಂತ ವರದಿ, ಕೊಡಗು:

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಾ.20 ರಂದು ಮಹಿಳೆಯರಿಗಾಗಿ ‘ಕಿರು ಕಥಾ ಸ್ಪರ್ಧೆ’(ನ್ಯಾನೋ ಕಥೆ)ಯನ್ನು ಆಯೋಜಿಸಲಾಗಿದೆ ಎಂದು ಘಟಕದ ಅಧ್ಯಕ್ಷ ಕಿಗ್ಗಾಲು ಎಸ್.ಗಿರೀಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಸಾಹಿತ್ಯದ ಬೆಳವಣ ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕೊಡಗು ಜಿಲ್ಲಾ ಘಟಕ ಪ್ರಸಕ್ತ ಸಾಲಿನಲ್ಲಿ ಕೊಡಗಿನಲ್ಲಿ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕೊಡಗು ವ್ಯಾಪ್ತಿಯ ಮಹಿಳೆಯರಿಗಾಗಿ ನ್ಯಾನೋ ಕಥೆ ಅಥವಾ ಸ್ವಾರಸ್ಯಕರವಾದ ಕಿರುಬರಹದ ರಚನೆಯ ಸ್ಪರ್ಧೆ ಮಾ. 20 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿಯ ಕೊಡಗು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ ಎಂದರು.

ಸ್ಪರ್ಧೆಯಲ್ಲಿ ನೀಡಲಾಗುವ ವಿಷಯದ ಕುರಿತು ಗರಿಷ್ಠ ಒಂದು ನೂರು ಪದಗಳನ್ನು ಮೀರದಂತೆ, ಯಾವುದೇ ಜಾತಿ, ಮತ, ಪಂಥ, ಧರ್ಮಗಳ ಭಾವನೆಗಳಿಗೆ ಧಕ್ಕೆಯಾಗದ ಹಾಗೂ ಯಾವುದೇ ವ್ಯಕ್ತಿಯ ತೇಜೋವಧೆಯಾಗದ, ರಾಜಕೀಯ ಛಾಯೆಯೂ ಇಲ್ಲದ ಕಿರುಕಥೆ ಅಥವಾ ಕಿರು ಬರಹಗಳನ್ನು ಮೂವತ್ತು ನಿಮಿಷಗಳ ಸಮಯದಲ್ಲಿ ರಚಿಸಬೇಕು ಎಂದರು.

ಇದರಲ್ಲಿ ಅತ್ಯುತ್ತಮವಾದ ಮೂರು ಬರಹಗಳನ್ನು ತೀರ್ಪುಗಾರರು ಸ್ಥಳದಲ್ಲಿಯೇ ಆಯ್ಕೆಮಾಡಲಿದ್ದು, ಆಯ್ಕೆಯಾದ ಈ ರಚನೆಗಳಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಅಲ್ಲದೆ, ಭಾಗವಹಿಸುವ ಎಲ್ಲಾ ಬರಹಗಾರ್ತಿಯರಿಗೆ ಪ್ರಶಂಸಾ ಪತ್ರದೊಂದಿಗೆ ಕಿರುಕಾಣ ಕೆಯನ್ನು ನೀಡಿ ಗೌರವಿಸಲಾಗುವುದೆಂದರು.

ಸನ್ಮಾನ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಘಟಕವು ಇತ್ತೀಚೆಗೆ ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಹೃದಯದಲ್ಲಿ ರಾಮಚಂದಿರ’ ಎಂಬ ವಿಷಯ ಕುರಿತು ಮೂರು ಹಂತಗಳಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿತ್ತು. ಒಟ್ಟು 2 ಸಾವಿರ ಕವಿ, ಕವಯಿತ್ರಿಯರು ಭಾಗವಹಿಸಿದ್ದ ಈ ಕವಿಗೋಷ್ಠಿಯಲ್ಲಿ ಆಯ್ಕೆಗಳು ನಡೆದು, ಮೈಸೂರಿನಲ್ಲಿ ನಡೆದ ಅಂತಿಮ ಸುತ್ತಿನ ಕವಿಗೋಷ್ಠಿಯಲ್ಲಿ 57 ಕವಿಮನಸ್ಸುಗಳು ಭಾಗವಹಿಸಿದ್ದು, ಇವರಲ್ಲಿ ಹಿರಿಯರ ವಿಭಾಗದಿಂದ ಕೊಡಗಿನ ಅಂಬೆಕಲ್ಲು ಸುಶೀಲ ಕುಶಾಲಪ್ಪ ದ್ವಿತೀಯ ಸ್ಥಾನವನ್ನು ಹಾಗೂ ಕಿರಿಯರ ವಿಭಾಗದಿಂದ ಕೋರನ ಹೃತ್ಪೂರ್ವಕ್ ಸುನಿಲ್ ಪ್ರಥಮ ಸ್ಥಾನಕ್ಕೆ ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕೊಡಗು ಜಿಲ್ಲಾ ಘಟಕವು ಇವರನ್ನು ಕಿರುಕಥಾ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಿದೆಯೆಂದರು.

ಕಥಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಪರಿಷದ್‌ನ ಜಿಲ್ಲಾ ಖಜಾಂಚಿ ಆಶಾ ಧರ್ಮಪಾಲ್ ಅವರನ್ನು ಮೊ. 7975489051 ಮೂಲಕ ಮಾ.19 ರ ಒಳಗಾಗಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವoತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಬ್ಬೀರ ಸರಸ್ವತಿ, ಖಜಾಂಚಿ ಕಡ್ಲೇರ ಆಶಾ ಧರ್ಮಪಾಲ್, ನಗರಾಧ್ಯಕ್ಷ ಕೋರನ ಸುನಿಲ್, ನಿರ್ದೇಶಕರಾದ ಕಸ್ತೂರಿ ಗೋವಿಂದಮ್ಮಯ ಹಾಗೂ ಮೊಣ್ಣಂಡ ಶೋಭಾ ಸುಬ್ಬಯ್ಯ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss