ಮಹಿಳಾ ವಿಶ್ವಕಪ್‌: ನ್ಯೂಜಿಲ್ಯಾಂಡ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ವೆಸ್ಟ್‌ ಇಂಡೀಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಮಹಿಳಾ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಆತೀಥೇಯ ನ್ಯೂಜಿಲ್ಯಾಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ವನಿತೆಯರು 3 ರನ್‌ ಗಳ ರೋಚಕ ಗೆಲುವು ಸಾಧಿಸಿದ್ದಾರೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ವಿಂಡೀಸ್‌ ವನಿತೆಯರು ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಶತಕ (119 ರನ್ ) ದ ಬಲದಿಂದ ನಿಗದಿತ 50 ಓವರ್‌ ಗಳಲ್ಲಿ 259 ರನ್‌ ಕಲೆ ಹಾಕಿದರು. 260 ರನ್‌ ಗಳ ಗುರಿ ಬೆನ್ನುಹತ್ತಿದ ನ್ಯೂಜಿಲ್ಯಾಂಡ್‌ ನಿಗದಿತ ಓವರ್‌ ಗಳಲ್ಲಿ 256 ರನ್‌ ಮಾತ್ರವೇ ಕಲೆ ಹಾಕಿ ಸೋಲು ಒಪ್ಪಿಕೊಂಡಿತು.
ನ್ಯೂಜಿಲ್ಯಾಂಡ್‌ ಗೆಲುವಿಗೆ ಕೊನೆಯ ಮೂರು ಎಸೆತಗಳಲ್ಲಿ 4 ರನ್‌ ಗಳ ಆಗತ್ಯವಿತ್ತು. ಈ ಹಂತದಲ್ಲಿ ಮಾರಕ ದಾಳಿ ನಡೆಸಿದ ಡಿಯಾಂಡ್ರಾ ಡಾಟಿನ್ ಕೇವಲ ಒಂದು ರನ್‌ ಬಿಟ್ಟುಕೊಡುವ ಮೂಲಕ ನ್ಯೂಜಿಲ್ಯಾಂಡ್‌ ಕೈಯ್ಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.
ಸಂಕ್ಷಿಪ್ತ ಸ್ಕೋರ್‌: ವೆಸ್ಟ್ ಇಂಡೀಸ್ 259/9 (ಹೇಲಿ ಮ್ಯಾಥ್ಯೂಸ್ 119, ಚೆಡಿಯನ್ ನೇಷನ್ 36; ಲಿಯಾ ತಹುಹು 3-57) ವಿರುದ್ಧ ನ್ಯೂಜಿಲೆಂಡ್ 256/10 (ಸೋಫಿ ಡಿವೈನ್ 108, ಕೇಟಿ ಮಾರ್ಟಿನ್ 44; ಡಿಯಾಂಡ್ರಾ ಡಾಟಿನ್ 2-2)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!