ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​​: ಲಾಂಗ್​​ ಜಂಪ್​​ನಲ್ಲಿ ಮುರುಳಿ ಫೈನಲ್​ಗೆ, ಈ ಸಾಧನೆ ಮಾಡಿದ ಮೊದಲ ಭಾರತೀಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​​ನಲ್ಲಿ ಭಾರತದ ಅನೇಕ ಅಥ್ಲೆಟ್ಸ್​​ಗಳು ಭಾಗಿಯಾಗಿದ್ದು, ಇದೀಗ ಪುರುಷರ ಲಾಂಗ್​​ ಜಂಪ್​​ನಲ್ಲಿ ಭಾರತದ ಮುರಳಿ ಶ್ರೀಶಂಕರ್​​ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ 8 ಮೀಟರ್​ ಜಿಗಿಯುವ ಮೂಲಕ ಕೇರಳದ 23 ವರ್ಷದ ಶ್ರೀಶಂಕರ್​​ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಸುತ್ತಿನಲ್ಲಿ ಜಪಾನ್‌ನ ಯುಕಿ ಹಶಿಯೋಕಾ (8.18 ಮೀ) ಮತ್ತು ಯುಎಸ್‌ಎಯ ಮಾರ್ಕ್ವಿಸ್ ಡೆಂಡಿ (8.16 ಮೀ) ಜಿಗಿದಿದ್ದಾರೆ.
ಈ ಹಿಂದೆ ಭಾರತದ ಅಂಜು ಬಾಬಿ ಜಾರ್ಜ್​ ಲಾಂಗ್​ ಜಂಪ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದರು. ಇವರು 2003ರಲ್ಲಿ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮತ್ತೊಂದು ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್​​ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್​​ ಚಾಂಪಿಯನ್​ಶಿಪ್​ನಲ್ಲಿ ಜಾವಲಿನ್​ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಭಾಗಿಯಾಗಿದ್ದು, ಚಿನ್ನಕ್ಕೆ ಮುತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!