Sunday, April 18, 2021

Latest Posts

ಕೋವಿಡ್ ಲಸಿಕೆ: ಭಾರತದ ಬೆನ್ತಟ್ಟಿದ ವಿಶ್ವ ಬ್ಯಾಂಕ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಗತ್ತಿನ ದೈತ್ಯ ಲಸಿಕಾ ತಯಾರಕಾ ಸಂಸ್ಥೆಗಳನ್ನು ಹೊಂದಿರುವ ಭಾರತ ನಿಜಕ್ಕೂ ಅದೃಷ್ಟವಂತ ದೇಶ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೊಗಳಿದ್ದಾರೆ.

ಕೊರೋನಾ ಲಸಿಕೆ ತಯಾರು ಮಾಡುತ್ತಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ವಿತರಿಸುತ್ತಿರುವ ಭಾರತದ ಕಾರ್ಯಕ್ಕೆ ವಿಶ್ವಬ್ಯಾಂಕ್ ಸಂತಸ ವ್ಯಕ್ತಪಡಿಸಿದೆ.

ವಿಶ್ವಬ್ಯಾಂಕ್ ನ ವಾರ್ಷಿಕ ಸಭೆಯ ವೇಳೆ ನಡೆದ ರೌಂಡ್ ಟೇಬಲ್ ಸಭೆಯ ವೇಳೆ ಮಾತನಾಡಿದ ಅವರು, ಜಾಗತಿಕ ಲಸಿಕೆಗಳ ಪ್ರಮುಖ ತಯಾರಕರನ್ನು ಹೊಂದಿರುವ ಭಾರತ ನಿಜಕ್ಕೂ ಅದೃಷ್ಟವಂತ ದೇಶ. ನಾನು ಸೇರಮ್ ಇನ್ಸ್ ಟಿಟ್ಯೂಟ್ ನೊಂದಿಗೆ ಮಾತುಕತೆ ನಡೆಸಿದ್ದು, ಉತ್ಪಾದನೆಯ ಬಗ್ಗೆ ಪಾರದರ್ಶಕತೆಗೆ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು.

ಈಗಾಗಲೇ ವಿಶ್ವ ಬ್ಯಾಂಕ್ 50 ದೇಶಗಳೊಂದಿಗೆ ಲಸಿಕೆ ಸಂಬಂಧ ಒಪಂದ ಮಾಡಿಕೊಂಡಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಲಸಿಕೆ ಒದಗಿಸುವ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್ ಸಹಾಯ ಮಾಡುತ್ತಿದೆ.

ಭಾರತ ತನ್ನ ಲಸಿಕೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಕಳುಹಿಸಿದ್ದು, ತನ್ನ ದೇಶದಲ್ಲೂ ಉತ್ತಮ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss