ವಿಶ್ವ ಕ್ಯಾನ್ಸರ್ ದಿನ: ಒಂದೇ ವರ್ಷದಲ್ಲಿ 78 ಸಾವಿರ ಮಂದಿಗೆ ಕ್ಯಾನ್ಸರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ವರ್ಷ ಫೆ.4 ರಂದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ಯಾರಿಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ಯಾನ್ಸರ್ ಕಾನ್ಫರೆನ್ಸ್‌ನಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಕ್ಯಾನ್ಸರ್ ದಿನ ಆಚರಣೆಗೆ ಸಹಿ ಮಾಡಲಾಗಿದೆ. ಈ ಬಾರಿ ‘ಕ್ಲೋಸ್ ದಿ ಕೇರ್ ಗ್ಯಾಪ್’ ( ಆರೈಕೆಯಲ್ಲಿರುವ ಅಂತರವನ್ನು ಕಡಿತಗೊಳಿಸಿ) ಎನ್ನುವ ಥೀಮ್ ಇಡಲಾಗಿದೆ.

ಜಾಗತಿಕವಾಗಿ ಕ್ಯಾನ್ಸರ್ ಹೊರೆ ಹೆಚ್ಚುತ್ತಿದೆ. 2030ರ ವೇಳೆಗೆ 27 ದಶಲಕ್ಷ ಮಂದಿಗೆ ಕ್ಯಾನ್ಸರ್ ಬಾಧಿಸಬಹುದು ಎಂದು ಅಂದಾಜಿಸಲಾಗಿದೆ. ವರ್ಷಕ್ಕೆ 17 ದಶಲಕ್ಷ ಸಾವುಗಳು ಕ್ಯಾನ್ಸರ್‌ನಿಂದ ಸಂಭವಿಸಬಹುದು ಎನ್ನಲಾಗಿದೆ. ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ರೋಗಿಗಳು ದ್ವಿಗುಣಗೊಂಡಿದ್ದಾರೆ. ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿ ಪ್ರಕಾರ 2021 ರಲ್ಲಿ ರಾಜ್ಯದಲ್ಲಿ 78,381 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಶೋಧನೆ ಮತ್ತು ತರಬೇತಿ ಕೇಂದ್ರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

  • ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳೇನು?
    ಧೂಮಪಾನ
    ಧೂಮಪಾನ ಮಾಡುವವರ ಜತೆ ನಿಲ್ಲುವುದು, ಸೆಕೆಂಡ್ ಹ್ಯಾಂಡ್ ಸ್ಮೋಕ್
    ಸನ್ ಬರ್ನ್
    ಮದ್ಯಪಾನ
    ಅಸುರಕ್ಷಿತ ಲೈಂಗಿಕ ಸಂಪರ್ಕ
    ಕೆಮಿಕಲ್ಸ್
    ಅನುವಂಶಿಕತೆ
  • ಕ್ಯಾನ್ಸರ್ ಬಾರದಂತೆ ಹೀಗೆ ತಡೆಗಟ್ಟಿ..
    ಯಾವುದೇ ರೀತಿಯ ಟೊಬ್ಯಾಕೊ ಸೇವನೆ ಬೇಡ
    ಆರೋಗ್ಯಕ ಆಹಾರಕ್ಕೆ ಒತ್ತು
    ಬೊಜ್ಜು ಬರಿಸಿಕೊಳ್ಳಬೇಡಿ, ದೈಹಿಕವಾಗಿ ಸಕ್ರಿಯರಾಗಿರಿ
    ಸೂರ್ಯನ ಹಾನಿಕಾರಕ ಕಿರಣಗಳಿಗೆ ಮೈಯೊಡ್ಡಬೇಡಿ
    ವ್ಯಾಕ್ಸಿನ್ ಹಾಕಿಸಿ
    ಆಗಾಗ ಸಂಪೂರ್ಣ ಮೆಡಿಕಲ್ ಚೆಕಪ್ ಮಾಡಿಸಿ
    ವ್ಯಾಯಾಮ, ನಡಿಗೆಗೆ ಪ್ರಾಮುಖ್ಯತೆ ನೀಡಿ.
    ಮಾನಸಿಕವಾಗಿ ಕುಂದದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!