ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣದಲ್ಲಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ನಡೆಯಲಿದ್ದು, ಟಿಕೆಟ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಅದರಲ್ಲಿಯೂ ಯುವಪೀಳಿಗೆಯಲ್ಲಿ ಕ್ರಿಕೆಟ್ ಜೋಶ್ ಹೆಚ್ಚಾಗಿದ್ದು, ಈಗಾಗಲೇ ಆನ್‌ಲೈನ್ ಟಿಕೆಟ್ ಖಾಲಿಯಾಗಿದೆ. ಇಂದಿನಿಂದ ಆಫ್‌ಲೈನ್ ಮಾರಾಟ ನಡೆಯುತ್ತಿದ್ದು, ಟಿಕೆಟ್ ಖರೀದಿಗಾಗಿ ನೂಕುನುಗ್ಗಲು ನಡೆದಿದೆ.
ಟಿಕೆಟ್ ಖರೀದಿಗಾಗಿ ನೆನ್ನೆ ರಾತ್ರಿಯಿಂದಲೇ ಕೌಂಟರ್ ಬಳಿ ಮಲಗಿದ್ದ ಯುವಕರು ಬೆಳಗ್ಗೆ ಮೊದಲ ಟಿಕೆಟ್ ಪಡೆದು ಮನೆಗೆ ತೆರಳಿದ್ದರು ಎನ್ನಲಾಗಿದೆ. 600-5000ದವರೆಗೂ ಟಿಕೆಟ್ ಲಭ್ಯವಿದೆ.
ಇನ್ನೂ ಹಲವು ಅಭಿಮಾನಿಗಳು ಬೇರೆಲ್ಲಾ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿ ಭಾನುವಾರ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ಮ್ಯಾಚ್ ನೋಡೋ ನಿರ್ಧಾರ ಮಾಡಿದ್ದಾರೆ.