ಜನವರಿ 7- 8 ರಂದು ವಿಶ್ವ ಪ್ರಸಿದ್ಧ ಹಂಪಿ ಉತ್ಸವ: ಜಿಲ್ಲಾಧಿಕಾರಿ

ಹೊಸದಿಗಂತ ವರದಿ,ವಿಜಯನಗರ:

ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಿದ್ದು, ಜ.7 ಹಾಗೂ 8 ರಂದು  ಎರಡು ದಿನಗಳ ಕಲ ಹಂಪಿ ಉತ್ಸವವನ್ನು ವಿಜೃಂಭಣೆಯಾಗಿ ಆಚರಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ತಿಳಿಸಿದರು.
ಸಮೀಪದ ಕಮಲಾಪುರ ಕರಡಿಧಾಮದ ನೇಚರ್ ಕ್ಯಾಂಪ್‍ನ ಆವರಣದಲ್ಲಿ  ಶುಕ್ರವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಜಾಹಿರಾತು ಸಮಿತಿ, ಆಹ್ವಾನ ಪತ್ರಿಕೆ, ಕರಪತ್ರ, ನೆನಪಿನ ಕಾಣಿಕೆ, ಪಾಸ್, ಪ್ರಮಾಣಪತ್ರ, ಬ್ಯಾನರ್ ಸಮಿತಿ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಪ್ರದರ್ಶನ ಸಮಿತಿ, ವೇದಿಕೆಗಳ ಸಮಿತಿ, ಕ್ರೀಡಾ ಸಮಿತಿ, ಜಾನಪದ ವಾಹಿನಿ ಮೆರವಣಿಗೆ, ಶೋಭಾಯಾತ್ರೆ, ಪುಸ್ತಕ ಪ್ರದರ್ಶನ, ಚಿತ್ರಕಲಾ ಶಿಬಿರ, ಶಿಲ್ಪಕಲೆ ಶಿಬಿರ, ಕವಿಗೋಷ್ಠಿ, ವಿಚಾರ ಸಂಕಿರಣ, ಶಾಲಾ ಮಕ್ಕಳ ನೃತ್ಯ, ಪ್ರಬಂಧ ಸ್ಪರ್ಧೆ, ವಿಜಯನಗರ ಧ್ವನಿ ಬೆಳಕು ಕಾರ್ಯಕ್ರಮ, ಕಲಾವಿದರ ಆಯ್ಕೆ ಸಮಿತಿ, ರಾಯಲ್ಸ್ ದರ್ಬಾರ್ ಧ್ವನಿ ಬೆಳಕು ಕಾರ್ಯಕ್ರಮ, ತುಂಗಾ ಅರತಿ ಮಹೋತ್ಸವ ಸಮಿತಿ, ಹಂಪಿ ಬೈ ಸ್ಕೈ ಸಮಿತಿ, ವಸಂತ ವೈಭವ ಕಾರ್ಯಕ್ರಮ ಸಮಿತಿ ಹಾಗೂ ಹಣಕಾಸು ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ವಿವಿಧ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆಗಳನ್ನು ಪಡೆದರು. ನಂತರ ಅನುಸರಿಸಬೇಕಾದ ಕ್ರಮಗಳು ಕುರಿತು ತಿಳಿಸಿದರು. ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಹಿನ್ನಲೆಯಲ್ಲಿ ರಚಿಸಲಾದ ಸಮಿತಿಗಳ ಅಧಿಕಾರಿಗಳ ಸಭೆಯನ್ನು ಕರೆದು ಹಂಪಿ ಉತ್ಸವ ಆಚರಣೆಯ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!