ಹೊಸ ದಿಗಂತ ಆನ್ ಲೈನ್ ಡೆಸ್ಕ್:
2021ರ ವಿಶ್ವ ಸಂತೋಷ ವರದಿಯ ಲಿಸ್ಟ್ ನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, 149 ದೇಶಗಳ ಪೈಕಿ ಭಾರತ 139ನೇ ಸ್ಥಾನ ಪಡೆದಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್ ವರ್ಕ್ ವಿಶ್ವ ಸಂತೋಷ ವರದಿಯನ್ನು ಬಿಡುಗಡೆ ಮಾಡಿದ್ದು, 149 ದೇಶಗಳ ಪೈಕಿ ಭಾರತ 139ನೇ ಸ್ಥಾನದಲ್ಲಿದೆ. 2019ರಲ್ಲಿ ಭಾರತ 140ನೇ ಸ್ಥಾನ ಪಡೆದಿತ್ತು.
ವಿಶ್ವ ಸಂತೋಷದ ಸೂಚ್ಯಂಕದಲ್ಲಿ ಫಿನ್ಲ್ಯಾಂಡ್ ಗೆ ಅಗ್ರಸ್ಥಾನ ಸಿಕ್ಕಿದ್ದು, ನೆದರ್ಲ್ಯಾಂಡ್ಸ್, ಸ್ವೀಡನ್, ಜರ್ಮನಿ,ಐಸ್ ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್ಮ ತ್ತು ನಾರ್ವೆ ದೇಶಗಳು ನಂತರದ ಸ್ಥಾನಗಳನ್ನು ಪಡೆದಿದೆ.
ಚೀನಾ 84, ಬಾಂಗ್ಲಾದೇಶ 101, ಪಾಕಿಸ್ತಾನ 105ನೇ ಸ್ಥಾನ ಪಡೆದಿದೆ. ಬೋಟ್ಸ್ವಾನಾ 146, ರುವಾಂಡಾ 147, ಜಿಂಬಾಬ್ವೆ 148ನೇ ಸ್ಥಾನ ಪಡೆದಿದೆ.
- Advertisement -