Sunday, April 18, 2021

Latest Posts

WORLD HEALTH DAY: ಸದಾ ಆರೋಗ್ಯವಾಗಿರಬೇಕು ಎನ್ನುವುದಾದರೆ ಈ ಸಣ್ಣ ಪುಟ್ಟ ವಿಷಯಗಳ ಮೇಲೆ ಗಮನ ಇಡಿ

ಇಂದು ವಿಶ್ವ ಆರೋಗ್ಯ ದಿನ. ಜನರಿಗೆ ಕೊರೋನಾ ಕಾರಣದಿಂದಾಗಿ ತಮ್ಮ ಆರೋಗ್ಯದ ಮೇಲೆ ಹೆಚ್ಚು ಜವಾಬ್ದಾರಿ ಬಂದಿದೆ.ವಾಕ್,ಯೋಗ, ಮಿತ ಆಹಾರ ಆರಂಭಿಸಿದ್ದಾರೆ. ದೈಹಿಕವಾಗಿ ಆರೋಗ್ಯವಾಗಿರುವುದು ಎಷ್ಟು ಮುಖ್ಯವೋ ಮಾನಸಿಕವಾಗಿ ಆರೋಗ್ಯವಾಗಿರುವುದು ಕೂಡ ಅಷ್ಟೇ ಮುಖ್ಯ. ಆರೋಗ್ಯದ ಬಗ್ಗೆ ಈ ಮಾಹಿತಿ ನಿಮ್ಮಲ್ಲಿರಲಿ…

  • ಪಾಸಿಟಿವ್ ಆಗಿ ಇರುವ ವ್ಯಕ್ತಿಗಳಿಗೆ ಹೆಚ್ಚು ಆಯಸ್ಸು ಇರುತ್ತದೆ. ಅತೀ ಹೆಚ್ಚಾಗಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಪಾಸಿಟಿವ್ ಆದ ಜನರ ಬಳಿ ಸುಳಿಯುವುದಿಲ್ಲ.
  • ಒಂದು ಬಾಳೆಹಣ್ಣು ನಿಮ್ಮ ಮೂಡ್‌ನ್ನು ಚೆನ್ನಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ ಬಿ೬ ಮೂಡ್ ಮೇಲೆ ಇಂಪ್ಯಾಕ್ಟ್ ಮಾಡುತ್ತದೆ.
  • ತಂಪು ವಾತಾವರಣದಲ್ಲಿ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಅಲರ್ಜಿ ಸಮಸ್ಯೆ ಬರುವುದಿಲ್ಲ. ಕೆಲವೊಂದು ರೋಗಗಳು ಸುಳಿಯುವುದಿಲ್ಲ.
  • ಸುಸ್ತಾದಾಗ ಸುಮ್ಮನೆ ಕೂರುವುದಕ್ಕಿಂತ ವರ್ಕೌಟ್ ಮಾಡುವುದು ಒಳ್ಳೆಯದು. ಇದು ಎನರ್ಜಿ ಬೂಸ್ಟ್ ಮಾಡುತ್ತದೆ.ಸುಮ್ಮನೆ ಕುಳಿತಿದ್ದರೆ ಸುಸ್ತಾಗುವುದು ಮುಗಿಯುವುದೇ ಇಲ್ಲ.
  • ನಿಮ್ಮ ದೇಹದಲ್ಲಿ ಇರುವ ಮೂಳೆಗಳಲ್ಲಿ ಅರ್ಧದಷ್ಟು ಮೂಳೆಗಳು ಕಾಲು, ಕೈನಲ್ಲಿಯೇ ಇದೆ.
  • ನೂರು ಬಾರಿ ನಗುವುದು 15 ನಿಮಿಷ ಸೈಕಲ್ ಓಡಿಸುವುದು ಎರಡೂ ಒಂದೆ.
  • ನಿಮ್ಮ ಬಾಯಿಯಲ್ಲಿ ಜಗತ್ತಿನಲ್ಲಿರುವ ಜನಸಂಖ್ಯೆಗಿಂತ ಹೆಚ್ಚು ಬ್ಯಾಕ್ಟೀರಿಯಾಗಳಿವೆ.
  • ಕುಳಿತು ಟಿವಿ ನೋಡುವುದಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಮಲಗಿದಾಗ ಬರ್ನ್ ಮಾಡುತ್ತೇವೆ.
  • ಐಬ್ರೋಗಳ ಮುಖ್ಯ ಕೆಲಸ ಕಣ್ಣಿನೊಳಗೆ ಬೆವರು ಬೀಳದಂತೆ ನೋಡಿಕೊಳ್ಳುವುದು.
  • ಬಲಗೈ ಬಳಸುವ ವ್ಯಕ್ತಿಗಳು ಎಡಗೈ ಬಳಸುವ ವ್ಯಕ್ತಿಗಳಿಂದ ಒಂಬತ್ತು ವರ್ಷ ಹೆಚ್ಚು ಬದುಕುತ್ತಾರಂತೆ.
  • ನಮ್ಮ ಜೀವಿತಾವಧಿಯಲ್ಲಿ ನಾವು ಮೂವತ್ತು ಸಾವಿರ ಕೆ.ಜಿ ಆಹಾರ ತಿನ್ನುತ್ತೇವೆ. ಇದು ಆರು ಆನೆಗಳ ತೂಕ.
  • ಹೊಸ ಭಾಷೆ ಕಲಿಯುವುದು, ಹೊಸ ಮ್ಯೂಸಿಕ್ ಇನ್ಸ್‌ಟ್ರೂಮೆಂಟ್ ಕಲಿಯುವುದರಿಂದ ಮೆದುಳು ಚುರುಕಾಗುತ್ತದೆ.
  • ಕಾಫಿ ಕುಡಿಯುವುದರಿಂದ ಡಿಪ್ರೆಶನ್ ಬರುವುದಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss