Sunday, August 14, 2022

Latest Posts

ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದನೆ ನೀಡಿದೆ.
ಭಾರತದ ಔಷಧ ನಿಯಂತ್ರಕದಿಂದ ತುರ್ತು ಬಳಕೆಯ ಅಧಿಕಾರ ಪಡೆದಿರುವ ಆರು ಲಸಿಕೆಗಳಲ್ಲಿ ಕೋವ್ಯಾಕ್ಸಿನ್‌ ಒಂದಾಗಿದೆ. ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಜೊತೆಗೆ ಕೋವ್ಯಾಕ್ಸಿನ್‌ ಅನ್ನು ರಾಷ್ಟ್ರವ್ಯಾಪಿ ಲಸಿಕಾ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.
ಕೊವ್ಯಾಕ್ಸಿನ್ ಭಾರತದ ಮೊದಲ ಸ್ವದೇಶಿ ಕೊವಿಡ್ 19 ಲಸಿಕೆ ಆಗಿದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಐಸಿಎಮ್​ಆರ್ ಮತ್ತು ಎನ್​ಐವಿ ಜೊತೆಗೂಡಿ ಈ ಲಸಿಕೆ ಸಿದ್ಧಪಡಿಸಲಾಗಿದೆ. ಮಾರಿಷಸ್, ಓಮನ್, ಫಿಲಿಫೈನ್ಸ್, ನೇಪಾಳ, ಮೆಕ್ಸಿಕೊ, ಇರಾನ್, ಶ್ರೀಲಂಕಾ, ಗ್ರೀಸ್, ಎಸ್ಟೋನಿಯಾ ಮತ್ತು ಜಿಂಬಾಬ್ವೆ ಈ ಲಸಿಕೆಗೆ ಅನುಮೋದನೆ ಸೂಚಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss