ಉಜ್ಬೇಕಿಸ್ತಾನದಲ್ಲಿ ಭಾರತದ ಎರಡು ಕೆಮ್ಮಿನ ಸಿರಪ್ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಜ್ಬೇಕಿಸ್ತಾನದಲ್ಲಿ ಭಾರತದ ಎರಡು ಕೆಮ್ಮಿನ ಸಿರಪ್ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ನೊಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಉಜ್ಬೇಕಿಸ್ತಾನದ ಮಕ್ಕಳಿಗೆ ಬಳಸುವುದು ಬೇಡ ಎಂದು ಡಬ್ಲೂಎಚ್‌ಒ ಹೇಳಿದೆ.

ಈ ಔಷಧಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು, ನಿರ್ದಿಷ್ಟತೆಯಿಂದ ಹೊರಬಂದಿದೆ. ಹಾಗಾಗಿ ಈ ಸಿರಪ್‌ಗಳನ್ನು ಬಳಸಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಉಜ್ಬೇಕಿಸ್ತಾನದಲ್ಲಿ ಭಾರತ ಮೂಲದ ಕಂಪನಿಯ ಔಷಧ ಸೇವಿಸಿ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಚಿವಾಲಯ ಹೇಳಿಕೊಂಡಿದೆ. ಡಾಕ್-1 ಮ್ಯಾಕ್ಸ್ ಔಷಧವನ್ನು ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ನೀಡಲಾಗುತ್ತದೆ. ಉಜ್ಬೇಕಿಸ್ತಾನದಲ್ಲಿ 21 ಮಕ್ಕಳು ಔಷಧ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ 18 ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಮುನ್ನವೂ ಈ ಮಕ್ಕಳು ಔಷಧವನ್ನು ಮೂರು ನಾಲ್ಕು ಬಾರಿ ತೆಗೆದುಕೊಂಡಿದ್ದರು ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!