ವಿಶ್ವ ಹೃದಯ ದಿನ: ಹೃದಯಾಘಾತದ ಸೂಕ್ಷ್ಮ ಲಕ್ಷಣಗಳ ಬಗ್ಗೆ ತಿಳಿಯಿರಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ವಿಶ್ವ ಹೃದಯ ದಿನ, ಓಡುತ್ತಿರುವ ದಿನದ ಮಧ್ಯೆ ನಮ್ಮ ಬಗ್ಗೆ ಯೋಚನೆ ಮಾಡುವುದಕ್ಕೆ ಎರಡು ನಿಮಿಷ ಸಮಯ ನೀಡೋಣ.. ಇತ್ತೀಚಿನ ದಿನಚರಿ, ಆಹಾರ ಪದ್ಧತಿ, ಒತ್ತಡ ಎಲ್ಲವೂ ನಾನಾ ಖಾಯಿಲೆಗಳಿಗೆ ಆಹ್ವಾನ ನೀಡಿದಂತೆ ಆಗುತ್ತಿವೆ. ಅದರಲ್ಲಿಯೂ ಯುವ ಪೀಳಿಗೆಯಲ್ಲಿ ಹೃದಯ ಸಂಬಂಧಿ ಸಮಸ್ಯೆ, ಖಾಯಿಲೆ ಹಾಗೂ ಒತ್ತಡಗಳು ಕಾಡುತ್ತಿವೆ. ಎಷ್ಟೋ ಮಂದಿಗೆ ಹೃದಯಾಘಾತದ ಮೊದಲ ಲಕ್ಷಣಗಳ ಬಗ್ಗೆ ತಿಳಿದಿರುವುದಿಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ..

ಎದೆನೋವು, ಎದೆಯಲ್ಲಿ ಒತ್ತಡ, ಗಟ್ಟಿಯಾದ ಭಾಸ.
ಭುಜಗಳ ಭಾಗದಲ್ಲಿ ನೋವು, ಬೆನ್ನು ನೋವು, ಹಲ್ಲು ನೋವು ಹಾಗೂ ಹೊಟ್ಟೆಯ ಮೇಲ್ಭಾಗ ನೋವು
ತಣ್ಣಗಿನ ಬೆವರು
ಸುಸ್ತು
ಎದೆ ಉರಿ, ಜೀರ್ಣಕ್ರಿಯೆ ಆಗದಿರುವುದು
ವಾಂತಿ ಬರುವ ರೀತಿ ಆಗುವುದು
ತಲೆ ತಿರುಗುವುದು
ಇದ್ದಕ್ಕಿಂತೆಯೇ ಒತ್ತಡ ಎನಿಸವುದು
ಉಸಿರಾಡಲು ಕಷ್ಟವಾಗುವುದು

ಯಾವುದೇ ಲಕ್ಷಣಗಳು ಕಾಣಿಸಿದರೂ ಅದನ್ನು ನಿರ್ಲಕ್ಷ್ಯ ಮಾಡಬೇಡಿ.

ಹೃದಯದ ಆರೋಗ್ಯಕ್ಕೆ ಏನೇನು ಮಾಡಬೇಕು?
ಆರೋಗ್ಯಕರ ಆಹಾರ ಸೇವನೆ
ಸದಾ ದೈಹಿಕ ಚಟುವಟಿಕೆ ಇರಲಿ
ಆರೋಗ್ಯಕರ ತೂಕ ಇರಲಿ
ಧೂಮಪಾನದಿಂದ ದೂರ ಇರಿ, ಬೇರೆಯವರು ಧೂಮಪಾನ ಮಾಡುವಾಗಲೂ ದೂರ ನಿಲ್ಲಿ
ಕೊಲೆಸ್ಟ್ರಾಲ್ ಹಿಡಿತದಲ್ಲಿರಲಿ
ಮದ್ಯಪಾನಕ್ಕೆ ಮಿತಿ ಇರಲಿ
ಹೆಚ್ಚು ಒತ್ತಡ ಬೇಡ
ಮಾನಸಿಕ ಆರೋಗ್ಯದ ಮೇಲೆ ಗಮನ ಇರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!