Thursday, August 11, 2022

Latest Posts

ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾಧ್ಯಕ್ಷರಾಗಿ ಕೃಷ್ಣಮೂರ್ತಿ-ಕಾರ್ಯಾಧ್ಯಕ್ಷರಾಗಿ ಸುರೇಶ್ ಮುತ್ತಪ್ಪ ಆಯ್ಕೆ

ಹೊಸ ದಿಗಂತ ವರದಿ, ಮಡಿಕೇರಿ :

ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷರಾಗಿ ವಕೀಲ ಪಿ.ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷರಾಗಿ ಎಸ್.ಸುರೇಶ್ ಮುತ್ತಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುದಿಯೊಕ್ಕಡ ರಮೇಶ್ ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿಗೆ ಟಾಟಾ ಬೋಪಯ್ಯ ಹಾಗೂ ಟಿ.ಪಿ.ಶೆಣೈ ಅವರನ್ನು ನೇಮಕ ಮಾಡಲಾಗಿದೆ.
ಭಜರಂಗದಳಕ್ಕೆ ಆಯ್ಕೆ: ಭಜರಂಗದಳದ ಜಿಲ್ಲಾ ಸಂಯೋಜಕರಾಗಿ ಕೆ.ಎಂ.ಅನೀಶ್ ಕುಮಾರ್, ಸಹ ಸಂಯೋಜಕರಾಗಿ ವಿವೇಕ್ ರೈ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕರಾಗಿ ಅಂಬಿಕಾ ಉತ್ತಪ್ಪ ಹಾಗೂ ಸಹ ಸಂಯೋಜಕರಾಗಿ ಕು. ವಿಕಿತಾ ಆಯ್ಕೆಯಾಗಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ ಮಂಗಳೂರು ಕಾರ್ಯಾಲಯದ ಸೇವಾ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆದ ವಿಭಾಗ ಮಟ್ಟದ ಬೈಠಕ್ ನಲ್ಲಿ ವಿಭಾಗ ಕಾರ್ಯದರ್ಶಿ ಶರನ್ ಪಂಪ್ ವೆಲ್, ಕೇಂದ್ರಿಯ ಸಹ ಪ್ರಧಾನ ಕಾರ್ಯದರ್ಶಿ ಸ್ತಾನು ಮಾಲಯನ್, ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss