ಮೋದಿಯವರ ನಾಯಕತ್ವದಲ್ಲಿ ಜಗತ್ತು ಹೊಸ ಭಾರತವನ್ನು ನೋಡುತ್ತಿದೆ: ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಜಗತ್ತು ಹೊಸ ಭಾರತವನ್ನು ನೋಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಮೂರು ರಾಷ್ಟ್ರಗಳ ಭೇಟಿಯನ್ನು ಮುಗಿಸಿ ಭಾರತಕ್ಕೆ ಪ್ರಧಾನಿ ಆಗಮಿಸಿದ ಬಳಿಕ ಜೈಶಂಕರ್ ಈ ಮಾತನ್ನ ಹೇಳಿದ್ದಾರೆ.

“ಪಪುವಾ ನ್ಯೂಗಿನಿಯಾದ ಪ್ರಧಾನಿ ಮೋದಿ ‘ವಿಶ್ವ ಗುರು’ ಎಂದು ಹೇಳಿದರು. ಆಸ್ಟ್ರೇಲಿಯಾದ ಪ್ರಧಾನಿ ಪಿಎಂ ಮೋದಿಯನ್ನು ‘ದಿ ಬಾಸ್’ ಎಂದು ಕರೆದರು.” ಇಂದು ಭಾರತದ ಚಿತ್ರಣ, ಭಾರತದ ಕೀರ್ತಿ, ವಿಶ್ವದಲ್ಲಿ ಭಾರತದ ಸ್ಥಾನ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದರು.

ಮೂರು ರಾಷ್ಟ್ರಗಳ ಭೇಟಿಯನ್ನು ಮುಗಿಸಿಕೊಂಡು ಭಾರತಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಬೆಳಗ್ಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸ್ವಾಗತಿಸಿದರು. “ನಿಮ್ಮ ಆಡಳಿತ ಮಾದರಿಯನ್ನು ಜಗತ್ತು ಮೆಚ್ಚುತ್ತದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ನಿಮ್ಮ ಆಟೋಗ್ರಾಫ್ ಕೇಳಿದರು, ಇದು ನಿಮ್ಮ ನಾಯಕತ್ವದಲ್ಲಿ ಜಗತ್ತು ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸುತ್ತದೆ” ಎಂದು ನಡ್ಡಾ ಹೇಳಿದರು.

ಪಪುವಾ ನ್ಯೂಗಿನಿಯಾದ ಪ್ರಧಾನಿ ನಿಮ್ಮ ಪಾದಗಳನ್ನು ಮುಟ್ಟಿದ ರೀತಿ, ಅಲ್ಲಿ ನಿಮಗೆ ಎಷ್ಟು ಗೌರವವಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಪ್ರಧಾನಿಯನ್ನು ಈ ರೀತಿ ಸ್ವಾಗತಿಸುತ್ತಿರುವುದನ್ನು ಕಂಡಾಗ ಭಾರತದ ಜನತೆ ಹೆಮ್ಮೆ ಪಡುತ್ತಾರೆ. ಮುಂಜಾನೆ ಪ್ರಧಾನಿ ಮೋದಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಸದಸ್ಯರು ಹಾರ ಹಾಕಿ ಬರಮಾಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!