ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದ 60ಕ್ಕೂ ಹೆಚ್ಚು ದೇಶಗಳಿಗೆ ಕೊರೋನಾ ಲಸಿಕೆ ಪೂರೈಕೆ ಮಾಡಿದ ಭಾರತ ಬದ್ಧತೆ ಹಾಗೂ ಲಸಿಕೆ ಹಂಚಿಕೆಯ ಪ್ರಧಾನಿ ನರೇಂದ್ರ ಮೋದಿಯ ಅವರ ನೀತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಮೆಚ್ಚುಗೆ ಸೂಚಿಸಿದ್ದಾರೆ.
ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಟೆಡ್ರೊಸ್ ಅಧಾನೊಮ್, ಕೊರೋನಾ ಲಸಿಕೆಯ ನೀತಿಗೆ ಬೆಂಬಲಿಸಿದ್ದಕ್ಕೆ ಭಾರತ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು. ಕೊವ್ಯಾಕ್ಸ್ ಮತ್ತು ಕೊರೋನಾ ಲಸಿಕೆಯ ಹಂಚಿಕೆಯಲ್ಲಿ ತೋರಿದ ಬದ್ಧತೆಯಿಂದ ವಿಶ್ವದ 60ಕ್ಕೂ ಹೆಚ್ಚು ದೇಶಗಳು ನೆರವು ಪಡೆದಿದ್ದು,ಕೊರೋನಾ ವಾರಿಯರ್ಸ್ ಹಾಗೂ ಆದ್ಯತೆಯ ಮೇರೆಗೆ ಲಸಿಕೆ ನೀಡಿವೆ. ಇತರೆ ದೇಶಗಳು ಕೂಡ ಇದನ್ನು ಉದಾಹರಣೆಯಾಗಿ ಪಡೆದು ಪಾಲಿಸುತ್ತವೆ ಎಂಬ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.
ಭಾರತ ಯುನಿಸೆಫ್ನೊಂದಿಗೆ ಸಹಯೋಗದಂತೆ ಬುಧವಾರವಷ್ಟೇ ಆಫ್ರಿಕಾ ದೇಶವಾದ ಘಾನಾಕ್ಕೆ ಆರು ಲಕ್ಷ ಕೊರೋನಾ ಲಸಿಕೆಯ ಡೋಸ್ಗಳನ್ನು ಪೂರೈಸಿತ್ತು. ಸದ್ಯ ವಿಶ್ವದ 92 ದೇಶಗಳಿಗೆ ಲಸಿಕೆ ಪೂರೈಸುವ ಚಿಂತನೆಯೂ ಯುನಿಸೆಫ್ ಮುಂದಿದೆ.