spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಮೊದಲ ತೇಲುವ ನಗರ 2025ರವೇಳೆಗೆ ಪೂರ್ಣಗೊಳ್ಳಲಿದೆ!
ಹೌದು, ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಸಮುದ್ರ ಮಟ್ಟದ ಹೆಚ್ಚಳ ಸಮಸ್ಯೆ ನಿಭಾಯಿಸಲು ಬೂಸಾನ್ ಕರಾವಳಿಯಿಂದ ತೇಲುವ ನಗರ ನಿರ್ಮಿಸಲಾಗುತ್ತಿದೆ. ಇದಕ್ಕೆ ವಿಶ್ವಸಂಸ್ಥೆಯ ಬೆಂಬಲವೂ ಇದೆ. ಇಲ್ಲಿ ಹಲವಾರು ಮಾನವ ನಿರ್ಮಿತ ದ್ವೀಪಗಳು ಇರಲಿವೆ, ಪ್ರವಾಹ ನಿರೋಧಕ ಮೂಲಸೌಕರ್ಯ ಇರಲಿದೆ. ಇದು ಸಮುದ್ರದಲ್ಲಿ ತೇಲುವ ಮುಖಾಂತರ ಪ್ರವಾಹದ ಅಪಾಯವನ್ನು ತೊಡೆದುಹಾಕುವ ಗುರಿ ಹೊಂದಿದೆ.

World's First Solar-Powered Floating Island Opens in Seoul!ಓಷನಿಕ್ಸ್ ಹಾಗೂ ಯುನ್ ಹ್ಯೂಮನ್ ಸೆಟ್ಲ್‌ಮೆಂಟ್ ಪ್ರೋಗ್ರಾಂನ ಜಂಟಿ ಪ್ರಯತ್ನ ಇದಾಗಿದ್ದು, ಈ ನಗರದಲ್ಲಿ ಸೌರ ಫಲಕಗಳು ಹೆಚ್ಚಿರಲಿವೆ. ಇದರಿಂದ ತನ್ನದೇ ಆದ ವಿದ್ಯುತ್ ಉತ್ಪಾದಿಸಲಾಗುತ್ತದೆ.

Backed by the United Nations South Korea is building the world's first floating  city - It will be fully sustainable, consist of several islands anchored to  the sea floor and be readyಪ್ರಯಾಣಿಕರು, ಪ್ರವಾಸಿಗರು, ವಿವಾಸಿಗಳ ಓಡಾಟಕ್ಕೆ ವಿಶೇಷವಾಗಿ ತಯಾರಿಸಿದ ದೋಣಿಗಳು ಇರಲಿವೆ. ಒಟ್ಟಾರೆ 75 ಹೆಕ್ಟೇರ್ ವಿಸ್ತೀರ್ಣವಿರುವ ಈ ನಗರಿಯಲ್ಲಿ 10 ಸಾವಿರ ನಿವಾಸಿಗಳು ಇರಬಹುದಾಗಿದೆ. ಒಂದು ಗ್ರಾಮದಲ್ಲಿ 1,650 ನಿವಾಸಿಗಳಿಗೆ ಅವಕಾಶವಿದೆ.

Seoul Floating Islands / Haeahn Architecture & H Architecture | ArchDailyಪ್ರವಾಹ, ಸುನಾಮಿ ಹಾಗೂ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಿಂದ ಈ ನಗರಿ ಸುರಕ್ಷಿತವಾಗಿದೆ. ಇದಕ್ಕೆ ತಕ್ಕಂತಹ ವಿನ್ಯಾಸ ಮಾಡಲಾಗಿದೆ. ಒಟ್ಟಾರೆ ತೇಲುವ ನಗರಿ ನಿರ್ಮಾಣಕ್ಕೆ 200 ಮಿಲಿಯನ್ ಡಾಲರ್ ವೆಚ್ಚವಾಗಲಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss