ಭಾರತದ ಗೋಧಿಗೆ ವಿಶ್ವದಲ್ಲಿ ಹೆಚ್ಚಿದ ಬೇಡಿಕೆ: 2022ರಲ್ಲಿ ದಾಖಲೆ ಪ್ರಮಾಣದಲ್ಲಿ ರಫ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್

2022ರ ಹಣಕಾಸು ವರ್ಷದಲ್ಲಿ ಭಾರತದ ಗೋಧಿ ರಫ್ತು ಗಂಣನೀಯವಾಗಿ ಏರಿಕೆಕಂಡಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಕಡಿಮೆ ಪೂರೈಕೆಯಿಂದಾಗಿ ಭಾರತೀಯ ಗೋಧಿಯ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.ಜೊತೆಗೆ ಬೆಲೆಯಲ್ಲೂ ಹೆಚ್ಚಳ ಉಂಟಾಗಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಮಾರ್ಚ್ 2022ರ ಹೊತ್ತಿಗೆ, ಭಾರತವು 7.85 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ 2.1 ಮಿಲಿಯನ್ ರಫ್ತುಗಳಿಗಿಂತ ಹೆಚ್ಚಾಗಿದೆ. ಭಾರತವು ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಶ್ರೀಲಂಕಾ, ಒಮಾನ್ ಮತ್ತು ಕತಾರ್ ಸೇರಿದಂತೆ ಇತರ ಹಲವಾರು ದೇಶಗಳಿಗೆ ಗೋಧಿಯನ್ನು ರಫ್ತು ಮಾಡಿದೆ. ಭಾರತವು ಹೆಚ್ಚಿನ ಗೋಧಿಯನ್ನು ಪ್ರತಿ ಟನ್ʼಗೆ 225 ಡಾಲರ್ʼನಿಂದ 335 ಡಾಲರ್ʼಗೆ ಮಾರಾಟ ಮಾಡಿದೆ.
ಗೋಧಿ ರಫ್ತಿಗೆ ಸಂಬಂಧಿಸಿದಂತೆ ಭಾರತದ ಅತಿದೊಡ್ಡ ಗೋಧಿ ಆಮದುದಾರ ಈಜಿಪ್ಟ್ ನೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಗಮನಾರ್ಹವಾಗಿ, ಈಜಿಪ್ಟ್ ವಿಶ್ವದ ಅತಿದೊಡ್ಡ ಗೋಧಿ ಆಮದುದಾರ ರಾಷ್ಟ್ರವಾಗಿದೆ. ಈ ಹಿಂದೆ ಅವರು ರಷ್ಯಾ ಮತ್ತು ಉಕ್ರೇನ್ ನಿಂದ ಗೋಧಿಯನ್ನು ಖರೀದಿಸುತ್ತಿದ್ದರು. ಆದರೆ, ಯುದ್ಧದ ಕಾರಣದಿಂದಾಗಿ, ಗೋಧಿಯನ್ನು ಅಲ್ಲಿಂದ ಇನ್ನು ಮುಂದೆ ಪೂರೈಸಲಾಗುತ್ತಿಲ್ಲ.ಹೀಗಾಗಿ ಭಾರತದಿಂದ ಗೋಧಿಯನ್ನ ಪಡೆಯಲು ಮಾತುಕತೆ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!