ಅಬ್ಬಬ್ಬಾ! ವಿಶ್ವದ ಅತಿ ದೊಡ್ಡ ಸಿಹಿನೀರಿನ ಮೀನು ಬಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಬೋಡಿಯನ್ ಮೆಕಾಂಗ್ ನದಿಯಲ್ಲಿ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಮೀನು 13 ಅಡಿ ಉದ್ದ ಮತ್ತು 300 ಕೆಜಿ ತೂಗುತ್ತದೆ. ಇದನ್ನು ದಡಕ್ಕೆ ತರಲು ಮೀನುಗಾರರಿಗೆ ಸಾಕು ಸಾಕಾಯಿತು. 2005 ರಲ್ಲಿ, ಥೈಲ್ಯಾಂಡ್ನಲ್ಲಿ 293 ಕೆಜಿ ತೂಕದ ಕ್ಯಾಶ್ಫಿಶ್ ದೊರಕಿತ್ತು. ಅದಾದ ಬಳಿಕ 300 ಕೆಜಿ ತೂಗುವ ಮೀನು ಕಾಂಬೋಡಿಯಾದಲ್ಲಿ ದೊರಕಿದೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲಿ, ಮಾನ್ಸ್ಟರ್ ಫಿಶ್ ಶೋನ ನಿರೂಪಕ ಜೆಬ್ ಹೊಗನ್ ಅಧಿಕೃತವಾಗಿ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಎಂದು ಸ್ಪಷ್ಟಪಡಿಸಿದ್ದಾರೆ.

ಮೆಕಾಂಗ್ ವಿಶ್ವದ ಮೂರನೇ ಅತಿದೊಡ್ಡ ಮೀನುಗಾರಿಕಾ ನದಿಯಾಗಿದೆ. ಇಲ್ಲಿ ಕಂಡುಬಂದ ಅತಿ ದೊಡ್ಡ ಮೀನು ಖಮೇರ್ ಭಾಷೆಯಲ್ಲಿ ಕರೆಯಲ್ಪಡುವ ಕ್ರಿಸ್ಟೆನ್ ಬೋರಮಿ (ಹುಣ್ಣಿಮೆ ಆಕಾರ) ಯಂತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಮೀನುಗಾರರ ಮನವೊಲಿಸಿ ಎಲೆಕ್ಟ್ರಾನಿಕ್ ಟ್ಯಾಗ್ ಮೂಲಕ ಮತ್ತೆ ನೀರಿಗೆ ಬಿಡಲಾಯಿತು. ಸಂಶೋಧಕರು ಮೀನಿನ ಚಲನೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!