VIRAL VIDEO| ಈ ಐಸ್ ಕ್ರೀಮ್ ತಿನ್ನಬೇಕಂದ್ರೆ, ನೀವು ನಿಮ್ಮ ಆಸ್ತಿಯನ್ನು ಮಾರಾಟ ಮಾಡ್ಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂರ್ಯನ ಸುಡು ಬಿಸಿಲಿಗೆ ಜನ ತತ್ತರಿಸಿದ್ದಾರೆ. ಮನೆಯಿಂದ ಹೊರಗೆ ಬರುವುದೇ ಇಲ್ಲ. ರಸ್ತೆಗಳೆಲ್ಲ ನಿರ್ಜನವಾಗುತ್ತಿವೆ. ಎಸಿ, ಕೂಲರ್‌ಗಳಿಲ್ಲದಿದ್ದರೆ ಮನೆಗಳ ಪರಿಸ್ಥಿತಿ ಹೇಳತೀರದಾಗಿದೆ. ಈ ಸಮಯದಲ್ಲಿ ತಣ್ಣೀರು ಅಥವಾ ಐಸ್ ಕ್ರೀಂ ಎಷ್ಟು ಚೆನ್ನಾಗಿರುತ್ತದೆ. ಐಸ್ ಕ್ರೀಂ ಅಂದರೆ ಈಗಿನ ದರದಲ್ಲಿ ಕನಿಷ್ಠ 15 ಅಥವಾ 25 ರೂ. ಅಥವಾ ಶ್ರೀಮಂತರಾದರೆ ಇನ್ನೂರು ಮುನ್ನೂರು ರೂ ಇರಬಹುದು. ಆದರೆ ಈ ಐಸ್‌ ಕ್ರೀಂ ಬೆಲೆ ಲಕ್ಷ ಲಕ್ಷ ರೂಪಾಯಿ.

ನೀವು ಈ ಐಸ್‌ ಕ್ರೀಂ ತಿನ್ನಬೇಕಾದರೆ, ನಿಮ್ಮ ಆಸ್ತಿಯನ್ನು ನೀವು ಮಾರಾಟ ಮಾಡಬೇಕು. ಇದರ ಬೆಲೆ 5.2 ಲಕ್ಷ ರೂ. ಆಶ್ಚರ್ಯ ಆದರೂ ಇದು ನಿಜ ಕಣ್ರೀ ಈ ಐಸ್ ಕ್ರೀಂ ಬೆಲೆ ಅಕ್ಷರಶಃ 5.2 ಲಕ್ಷ ರೂ. ಜಪಾನಿನ ಐಸ್ ಕ್ರೀಮ್ ಕಂಪನಿಯಿಂದ ತಯಾರಿಸಲ್ಪಟ್ಟಿದೆ. ಈ ಐಸ್ ಕ್ರೀಮ್ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ಆಗಿದೆ. ಹಾಗಾಗಿಯೇ ಇದು ಗಿನ್ನಿಸ್ ದಾಖಲೆಯನ್ನೂ ಮಾಡಿದೆ.

ಈ ದುಬಾರಿ ಐಸ್ ಕ್ರೀಮ್ ಬೆಲೆ 8,73,400 ಜಪಾನೀಸ್ ಯೆನ್. ನಮ್ಮ ರೂಪಾಯಿ ಲೆಕ್ಕದಲ್ಲಿ 5.2 ಲಕ್ಷ ರೂ. ಅಪರೂಪದ ಹಾಗೂ ದುಬಾರಿ ಪದಾರ್ಥಗಳಿಂದ ಜಪಾನ್ ನ ಸೆಲ್ಯಾಟೊ ಕಂಪನಿ ಈ ಐಸ್ ಕ್ರೀಂ ತಯಾರಿಸಿದೆ. ಇದು ಗಿನ್ನೆಸ್ ವಿಶ್ವ ದಾಖಲೆಯಿಂದಲೂ ಗುರುತಿಸಲ್ಪಟ್ಟಿದೆ. ಇಟಲಿಯಲ್ಲಿ ಬೆಳೆದ ಬಿಳಿ ಟ್ರಫಲ್ ಅನ್ನು (ವಿಶ್ವದ ಅತ್ಯಂತ ದುಬಾರಿ ಪದಾರ್ಥಗಳಲ್ಲಿ ಒಂದಾಗಿದೆ) ಈ ಐಸ್ ಕ್ರೀಂನಲ್ಲಿ ಬಳಸಲಾಗಿದೆ.ಈ ಐಸ್ ಕ್ರೀಮ್ ತಯಾರಿಸಲು ಒಂದೂವರೆ ವರ್ಷ ತೆಗೆದುಕೊಂಡಿದೆ ಎಂದು ಕಂಪನಿಯ ಪ್ರತಿನಿಧಿ ತಿಳಿಸಿದರು. ಇದಕ್ಕೆ ಸಂಬಂಧಿಸಿದ 30 ಸೆಕೆಂಡ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://www.instagram.com/reel/CsY4XbbNfhd/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!