ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಈವರೆಗೆ ಶೇ. 50 ರಷ್ಟು ಬ್ಲ್ಯಾಕ್ ಫಂಗಸ್ ಏರಿಕೆ ಕಂಡಿದ್ದು, ಫಂಗಸ್ ಸೋಂಕಿಗೆ 2100 ಜನ ಮೃತಪಟ್ಟಿದ್ದು, 31,000 ಜನಕ್ಕೆ ಸೋಂಕು ತಗುಲಿದ್ದು , ಸೋಂಕಿನ ಏರಿಕೆ ಪ್ರಮಾಣವೂ ಶೇ.150ಕ್ಕಿಂತ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ , ದೇಶದ ವಿವಿಧ ಭಾಗಗಳಲ್ಲಿ ಈವರೆಗೆ 31,216 ಪ್ರಕರಣಗಳು ಮತ್ತು 2,109 ಸಾವುಗಳು ವರದಿಯಾ ಗಿವೆ. ಬ್ಲಾಕ್ ಫಂಗಸ್ ಸೋಂಕು ಪ್ರಕರಣ ಮತ್ತು ಸಾವಿನ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಮಾಹಿತಿ ನೀಡಿದೆ.
ಬ್ಲಾಕ್ ಫಂಗಸ್ ಸೋಂಕು ಪ್ರಕರಣ ಹೆಚ್ಚಳದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 7,057 ಪ್ರಕರಣಗಳು ದಾಖಲಾಗಿದ್ದು, 609 ಸಾವುಗಳು ಸಂಭವಿಸಿದೆ. ದ್ವಿತೀಯ ಸ್ಥಾನದಲ್ಲಿ ಗುಜರಾತ್ ಇದ್ದರೆ, 5,418 ಪ್ರಕರಣಗಳು ಮತ್ತು 323 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2,976 ಪ್ರಕರಣಗಳೊಂದಿಗೆ ರಾಜಸ್ಥಾನ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.