ಅಬ್ಬಾ… ನಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೇಸ್ ಬೆಲೆ ಇಷ್ಟು ದುಬಾರಿಯೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು, ಜೊತೆಗೆ ವಿವಿಧ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಇದೇ ರೀತಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಿನ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ಬರೋಬ್ಬರಿ 204 ಕೋಟಿ ರುಪಾಯಿ ಬೆಲೆಯ ಆಭರಣವನ್ನು ಧರಿಸಿದ್ದರು.

ಇದೀಗ ದುಬಾರಿ ಮೊತ್ತದ ನೆಕ್ಲೇಸ್ (Necklace) ಧರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಮೆಟ್ ಗಾಲಾ 2023 (Met Gala 2023) ಫ್ಯಾಷನ್ ಕಾರ್ಯಕ್ರಮದಲ್ಲಿ ಪತಿ ನಿಕ್ ಜೋನಸ್ (Nick Jonas)​ ಜೊತೆಗೆ ಭಾಗವಹಿಸಿದ್ದ ಚೋಪ್ರಾ, ಕಪ್ಪು ಬಣ್ಣದ ಗೌನ್ ಮಾದರಿಯ ಗ್ಲಾಮರಸ್ ಉಡುಗೆ ತೊಟ್ಟಿದ್ದು, ಕೈಗೆ ಬಿಳಿಯ ಬಣ್ಣದ ಗವಸು ಧರಿಸಿದ್ದರು. ಆದರೆ ಅತಿ ಹೆಚ್ಚು ಗಮನ ಸೆಳೆದಿದ್ದು ಪ್ರಿಯಾಂಕಾ ಕೊರಳಲ್ಲಿದ್ದ ಧರಿಸಿದ್ದ ಹೊಳೆಯುವ ನೆಕ್​ಲೆಸ್. ಬಿಳಿ ಬಣ್ಣದ ಆದರೆ ಅಂಚಿನಲ್ಲಿ ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತಿದ್ದ ವಜ್ರದ ನೆಕ್​ಲೆಸ್ ಧರಿಸಿದ್ದರು , ಈ ನೆಕ್​ಲೆಸ್ ಬೆಲೆ ಬರೋಬ್ಬರಿ 204 ಕೋಟಿ ರುಪಾಯಿಗಳು.

ಪ್ರಿಯಾಂಕಾ ಧರಿಸಿರುವ ಇಡೀಯ ನೆಕ್​ಲೆಸ್ ವಜ್ರದ್ದೇ ಆದರೂ ನೆಕ್​ಲೆಸ್​ನ ತುದಿಯಲ್ಲಿ ತೂಗುತ್ತಿರುವ ತಿಳಿ ನೀಲಿ ಬಣ್ಣದ ವಜ್ರದ ತುಣುಕಿಗೆ ಭಾರಿ ದೊಡ್ಡ ಬೆಲೆ. ಇದು ಬಲ್ಗರಿಯನ್ ಲಗೂನಾ ಬ್ಲೂ ಡೈಮೆಂಡ್. ವಿಶ್ವದಲ್ಲಿಯೇ ಅತಿ ಹೆಚ್ಚು ಬೆಲೆಗೆ ಹರಾಜಾದ ವಜ್ರದ ತುಣುಕುಗಳಲ್ಲಿ ಇದೂ ಒಂದು. 11.6 ಕ್ಯಾರೆಟ್​ನ ಈ ವಜ್ರ ನೈಸರ್ಗಿಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ, ಇದು ಅಪರೂಪದಲ್ಲಿ ಅಪರೂಪ. ಈ ಬಣ್ಣಕ್ಕೆ ಫ್ಯಾನ್ಸಿ ವಿವಿದ್ ಬ್ಲೂ ಎನ್ನಲಾಗುತ್ತದೆ ಜೊತೆಗೆ ಲಗೂನಾ ಬ್ಲೂ ಎಂದೂ ಕರೆಯಲಾಗುತ್ತದೆ.

1970 ರಲ್ಲಿ ಮೊದಲ ಬಾರಿಗೆ ಇಟ್ಯಾಲಿಯನ್ ಫ್ಯಾಷನ್ ಹೌಸ್ ಬಲ್ಗರಿ, ಲಗೂನ್ ಬ್ಲೂ ವಜ್ರವನ್ನು ಮಾರಾಟ ಮಾಡಿತ್ತು, ಆಗಿನ ಕಾಲಕ್ಕೆ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಲ್ಗರಿ ಆಭರಣ ಎಂಬ ಖ್ಯಾತಿಗೆ ಈ ವಜ್ರದ ತುಣುಕು ಪಡೆದುಕೊಂಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!