ಭಾರತಕ್ಕೆ ಲಗ್ಗೆ ಇಟ್ಟ ಕೊರೋನಾ ಎಕ್ಸ್​​ಇ: ಸೋಂಕಿನಿನ ಲಕ್ಷಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಲ್ಲಿ ನಿನ್ನೆಯಷ್ಟೇ ಮೊದಲ ಕೊರೋನಾ ಎಕ್ಸ್​​ಇ ಎಂಬ ರೂಪಾಂತರಿ ಗೋಚರಿಸಿಕೊಂಡಿದ್ದು, ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.
ಎಕ್ಸ್​​ಇ ಎಂಬ ರೂಪಾಂತರಿ ವೈರಾಣುಕೊರೋನಾ ತಳಿಗಳಲ್ಲೇ ಅತ್ಯಂತ ಹೆಚ್ಚು ಪ್ರಸರಣ ಸಾಮರ್ಥ್ಯ ಇರುವ ವೈರಸ್ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದೇ ರೀತಿ
ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ಎಚ್ಚರಿಕೆಯನ್ನು ನೀಡಿದೆ.
ಎಕ್ಸ್​ಇ ವೈರಾಣು, ಒಮಿಕ್ರಾನ್​ಗಿಂತಲೂ ವಿಭಿನ್ನ ಲಕ್ಷಣಗಳನ್ನು ಉಂಟು ಮಾಡುತ್ತದೆ. ಎಕ್ಸ್​ಇ ಸೋಂಕಿಗೆ ಒಳಗಾದವರು ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಎಕ್ಸ್​ಇ ವೈರಸ್​ ಭಾರತದಲ್ಲಿ ಮುಂಬೈನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾದ ಮೇಲೆ ಗುಜರಾತ್​​ನಲ್ಲಿ ಕೂಡ ಒಂದು ಕೇಸ್ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!