Tuesday, July 5, 2022

Latest Posts

ಯಾದಗಿರಿ| ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಉದ್ಘಾಟನೆ

ಹೊಸ ದಿಗಂತ ವರದಿ, ಯಾದಗಿರಿ: 

ಪೌರಕಾರ್ಮಿಕರು ನಗರಗಳನ್ನು ಅಚ್ಚು- ಕಟ್ಟಾಗಿ ಸ್ವಚ್ಚವಾಗಿಟ್ಟಿದ್ದಾರೆ. ಇವರ ಶ್ರಮದಿಂದಾಗಿ ಡೆಂಗೂ- ಚಿಕನ್ ಗುನ್ಯ ಗಳಂತಹ ರೋಗಗಳು ಕಡಿಮೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು.

ಯಾದಗಿರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ದೇಹದ ಆರೋಗ್ಯ ಮತ್ತು ಸದೃಢತೆ ಬಹಳ ಮುಖ್ಯವಾಗಿದೆ. ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಹಾಗಾಗಿ ದೈಹಿಕ ಸದೃಢತೆ ಜೀವನದಲ್ಲಿ ಬಹಳ ಮುಖ್ಯ. ಪ್ರತಿಯೊಂದು ನಗರಸಭೆಯಲ್ಲಿ ವಿಶೇಷವಾಗಿ ಸ್ಪೋರ್ಟ್ಸ ಗೋಸ್ಕರ ಅನುಕೂಲವಾದಷ್ಟು ಅನುದಾನವನ್ನು ಮೀಸಲಿಡಿ ಅದಕ್ಕೆ ನಾನು ಅನುಮೋದನೆ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ನುಡಿದರು. ಕೊರೊನಾ 2 ನೇ ಅಲೆ ಮತ್ತು ಲಾಕ್ ಡೌನ್ ಸಮಯದಲ್ಲಿನ ಪೌರಕಾರ್ಮಿಕರ ಸೇವೆ ಸ್ಪೂರ್ತಿದಾಯಕವಾಗಿದೆ ಎಂದರು.

ಇನ್ನೋರ್ವ ಉದ್ಘಾಟಕರಾಗಿ ಆಗಮಿಸಿದ ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್ ಮಾತನಾಡಿ, ಪೋಷಕರು ಮಕ್ಕಳಿಗೆ ಕಂಪ್ಯೂಟರ್ ನಲ್ಲಿ ಆಟಗಳು ಆಡುವಬದಲು ಮೈದಾನದಲ್ಲಿ ಆಡುವಂತೆ ಪ್ರೋತ್ಸಾಹಿಸಬೇಕಾಗಿದೆ. ಕ್ರೀಡೆಗಳು ಮನುಷ್ಯನನ್ನು ಆರೋಗ್ಯ ಮತ್ತು ಚುರುಕಾಗಿ ಇರಲು ಸಹಾಯ ಮಾಡುತ್ತದೆ. ಸ್ಟಡಿ ಎಷ್ಟು ಬೇಕೋ ಅಷ್ಟೇ ಸ್ಪೋರ್ಟ್ಸ್ ಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ ಮಾತನಾಡಿ ಸ್ಪೋರ್ಟ್ಸ್ ಇದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಯೋಗ, ಧ್ಯಾನ ಇನ್ನಿತರ ಚಟುವಟಿಕೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳಿಗೆ ಸ್ಪೋರ್ಟ್ಸ್ ನಲ್ಲಿ ಬರಲು ಪ್ರೋತ್ಸಾಹ ನೀಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಗಿಡಗಳನ್ನು ನೆಟ್ಟು ಪಶು- ಪಕ್ಷಿಗಳನ್ನು ರಕ್ಷಿಸಲು ಪಣ ತೊಡೋಣ ಎಂದರು.

ಯಾದಗಿರಿ ನಗರ ಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ ಮಾಡಬೇಕೆಂದು ಎಲ್ಲಾ ಪೌರಕಾರ್ಮಿಕರು ಮತ್ತು ನಗರಸಭೆ ಸದಸ್ಯರು ಸೇರಿ ನಿರ್ಣಯಿಸಿದೆ. ನಮ್ಮ ದೇಶದಲ್ಲಿ 3 ಇಲಾಖೆಗಳಾದ ಪೋಲೀಸ್ , ಆರೋಗ್ಯ, ನಗರಸಭೆಯ ಸಿಬ್ಬಂದಿಗಳು ವರ್ಷದ 365 ದಿನವೂ ಬಿಡುವಿಲ್ಲದೆಯೂ ಕಾರ್ಯನಿರ್ವಸುತ್ತಾರೆ. ಪೌರ ಕಾರ್ಮಿಕರಿಗೆ ಸರ್ಕಾರ ವಿಶೇಷ ಅನುದಾನ ಕೊಡುತ್ತಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್,ನಗರಸಭೆ ಆಯುಕ್ತ ಭಿ.ಟಿ ನಾಯಕ, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಂಕರ್ ಸೋನಾರ್, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಯಾದಗಿರಿ ಅಧ್ಯಕ್ಷ ರವಿಕುಮಾರ್ ಕೆ ದಾಸನ್ ಹಾಗೂ ಇನ್ನಿತರ ನಗರಸಭೆ ಮತ್ತು ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss