spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅರಮನೆಗೆ ಬಂದ ಕುಲದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್

- Advertisement -Nitte

ಹೊಸ ದಿಗಂತ ವರದಿ, ಮೈಸೂರು:

ಚಾಮುಂಡಿಬೆಟ್ಟದಿoದ ಮೆರವಣಿಗೆ ಮೂಲಕ ಮೈಸೂರಿನ ಅರಮನೆಗೆ ಆಗಮಿಸಿದ ತಮ್ಮ ಕುಲದೇವತೆ ಚಾಮುಂಡೇಶ್ವರಿಗೆ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬೆನ್ನಿನ ಮೇಲೆ ಇರುವ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತು ಸಾಗುವ ಚಾಮುಂಡೇಶ್ವರಿಯ ಮೂರ್ತಿಗೆ ಅರಮನೆಯಲ್ಲಿ ಯದುವೀರ್ ಅವರು ಪುಷ್ಪಾರ್ಚನೆ ಮಾಡಿ, ಸಂಪ್ರದಾಯದoತೆ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು.
ಚಿನ್ನದ ಅಂಬಾರಿಯಲ್ಲಿ ಕುಳಿತ ತಾಯಿಗೆ ವಿಶೇಷ ಅಲಂಕಾರ: ಬಳಿಕ ಅರಮನೆ ಮಂಡಳಿಯವರು ಸ್ಟ್ರಾoಗ್‌ರೂoನಿoದ ಚಿನ್ನದ ಅಂಬಾರಿಯನ್ನು ಹೊರತಂದು ಅದನ್ನು ಜಿಲ್ಲಾಡಳಿತದ ವಶಕ್ಕೆ ನೀಡಿದರು. ಚಾಮುಂಡೇಶ್ವರ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯೊಳಗೆ ಕೂರಿಸಿ, ಕೆಂಪು ವಸ್ತ, ಚಿನ್ನಾಭರಣಗಳಿಂದ ಅಲಂಕೃತಳಾಗಿದ್ದ ಚಾಮುಂಡೇಶ್ವರಿಗೆ ಹೂವುಗಳಿಂದ ವಿಶೇಷ ಅಲಂಕಾರವನ್ನು ಮಾಡಲಾಯಿತು. ಅಲ್ಲದೇ ಅಂಬಾರಿಗೆ ಮಲ್ಲಿಗೆ ಹೂವುಗಳ ಕುಚ್ಚಿನಿಂದ ಸುಂದರವಾಗಿ ಅಲಂಕಾರವನ್ನು ಮಾಡಲಾಯಿತು.
ಬಳಿಕ ಚಿನ್ನದ ಅಂಬಾರಿಯನ್ನು ಅರಮನೆಯಿಂದ ಹೊರತಂದು ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬೆನ್ನಿನ ಮೇಲೆ ಅಂಬಾರಿಯನ್ನು ಕೂರಿಸಿ, ಅತ್ತಿತ್ತ ವಾಲದಂತೆ ಬಿಗಿಯಾಗಿ ಕಟ್ಟಲಾಯಿತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss