Saturday, August 13, 2022

Latest Posts

ಯಾದಗಿರಿ| ಪೌರಕಾರ್ಮಿಕಳಿಗೆ ಲಭಿಸಿದ ರಾಜ್ಯೋತ್ಸವ ಪ್ರಶಸ್ತಿ

ಹೊಸ ದಿಗಂತ ವರದಿ ಯಾದಗಿರಿ :

ರಾಜ್ಯ ಸರ್ಕಾರ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗಿರಿನಾಡಿನ ಸ್ವಚ್ಛಭಾರತದ ರಾಯಭಾರಿ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬಬಲಾದ ಅವರು  ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ..

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದ್ದಿ ತಿಳಿದ ನಂತರ ಅವರು ತಮ್ಮ ಮನದಾಳದ ಮಾತುಗಳನ್ನು ಹೀಗೆ ಹಂಚಿಕೊಂಡರು- “30 ವರ್ಷಗಳಿಂದ ನಾನು ಪೌರಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೇನೆ. ನಗರ ಸ್ವಚ್ಛತೆಯೇ ನನ್ನ ಪರಮಕೆಲಸ, ಹಲವು ವರ್ಷಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಸಾಕಷ್ಟು ನಾಯಕರು, ಅಧಿಕಾರಿಗಳು, ಜನರು ನಮಗೆ ತೋರಿದ ಪ್ರೀತಿಯಿಂದ ನಾನು ಇನ್ನೂ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ”.

ರತ್ನಮ್ಮಳಿಗೆ ಐವರು ಮಕ್ಕಳು ಅವರಲ್ಲಿ ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು, ಪೌರಕಾರ್ಮಿಕಳಾಗಿ ಕೂಲಿ ಕೆಲಸ ಮಾಡುತ್ತಲೇ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿದರು. ಇವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರು ಅರಕೇರಾ ಜೆ ಶಾಲೆಯಲ್ಲಿ ಶಿಕ್ಷಕಿ ಮತ್ತೋರ್ವ ಮಗಳು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರು.

ಕಳೆದ 8 ವರ್ಷಗಳ ಹಿಂದೆ ಶಿವಪ್ಪ ಅವರು ನಿಧನರಾಗಿದ್ದು, ರತ್ನಮ್ಮಳು ಮಕ್ಕಳೊಂದಿಗೆ ಪೌರಕಾರ್ಮಿಳಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. 2021ರ ಮಾರ್ಚ್ ಅಂತ್ಯಕ್ಕೆ ಇವರ ನಿವೃತ್ತಿಯಾಗಲಿದ್ದು, ನಿವೃತ್ತಿಗೆ ಮುನ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಗಿರಿ ಜಿಲ್ಲೆಗೆ ಅವರು ಕೀರ್ತಿ ತಂದಿದ್ದಾರೆ. ನಗರ ಸಭೆಯ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಶುಭಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss